December 21, 2024

Newsnap Kannada

The World at your finger tips!

WhatsApp Image 2022 11 24 at 9.44.24 PM

Udupi- Josna, young women died due to low BP ಉಡುಪಿ- ಬಿಪಿ ಕಡಿಮೆಯಾಗಿ ಯುವತಿ ಜೋಸ್ನಾ ಕುಸಿದು ಸಾವು

ಉಡುಪಿ- ಬಿಪಿ ಕಡಿಮೆಯಾಗಿ ಯುವತಿ ಜೋಸ್ನಾ ಕುಸಿದು ಸಾವು

Spread the love

ಉಡುಪಿ – ಮದುವೆಗೂ ಮುನ್ನ ರೋಸ್ ಸಮಾರಂಭದಲ್ಲಿ, ಕುಸಿದು ಬಿದ್ದು ಯುವತಿ ಸಾವು.


ಕ್ರೈಸ್ತರ ಮದುವೆಯ ಮುನ್ನ ದಿನ ನಡೆಯುವ ರೋಸ್ ಕಾರ್ಯಕ್ರಮದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ಉಡುಪಿ ಕೊಳಲಗಿರಿ ಹಾವಂಜೆಯಲ್ಲಿ ನಡೆದಿದೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೋಧಕರ ವರ್ಗಾವಣೆಗೆ ಅಸ್ತು

ಮೃತ ಯುವತಿ ಹಾವಂಜೆ ನಿವಾಸಿ ಜೋಸ್ನಾ ಲೂಯಿಸ್ ನಿನ್ನೆ ರಾತ್ರಿ ಕೊಳಲಗಿರಿ ಹಾವಂಜೆಯ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ತೆರಳಿದ್ದರು.

ರಾತ್ರಿ 8.30ರ ಸುಮಾರಿಗೆ ಏಕಾಏಕಿಯಾಗಿ ರಕ್ತದ ಒತ್ತಡ ಕಡಿಮೆಯಾದ ಪರಿಣಾಮ ಜೋಸ್ನಾ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಜೋಸ್ನಾ ಕೊನೆಯುಸಿರೆಳೆದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!