January 9, 2025

Newsnap Kannada

The World at your finger tips!

bike acc

ಪಾರ್ಟಿಮುಗಿಸಿ ಮನೆಗೆ ಹೋಗುವಾಗ ಬೈಕ್ ಡಿವೈಡರ್​​ಗೆ ಡಿಕ್ಕಿ ಹೊಡೆದು ಇಬ್ಬರು ಸಾವು

Spread the love

ಮದ್ಯ ಸೇವನೆ ಮಾಡಿ ಬೈಕ್ ನಲ್ಲಿ ಹೈ-ಸ್ಪೀಡ್ ಹೋಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಬನಶಂಕರಿಯ ಪಿಇಎಸ್ ಕಾಲೇಜು ಬಳಿ ನಡೆದಿದೆ. ರಾಘವೇಂದ್ರ , ಲಕ್ಷ್ಮೀಶ್ ಮೃತ ದುರ್ದೈವಿಗಳು.

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಾಗರಬಾವಿಯಲ್ಲಿರುವ ಸೆರ್ ಲಾಕ್ ರೆಸ್ಟೋರೆಂಟ್​ನಲ್ಲಿ ಮದ್ಯ ಪಾರ್ಟಿ ಮಾಡಿ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ.

ಒಟ್ಟು ನಾಲ್ಕು ಜನ ಎರಡು ಬೈಕ್​ನಲ್ಲಿ ಹೋಗುತ್ತಿದ್ದರು ಈ ವೇಳೆ ಯಾರೊಬ್ಬರೂ ಹೆಲ್ಮೇಟ್ ಹಾಕಿರಲಿಲ್ಲ ಎನ್ನಲಾಗಿದೆ.

ಅಜಾಗರೂಕತೆ ಚಾಲನೆಯಿಂದ ಬೈಕ್ ಒಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಇಬ್ಬರಿಗೂ ಗಾಯಗಳಾಗಿತ್ತು. ಕೂಡಲೇ ಸ್ಥಳೀಯರು ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!