December 26, 2024

Newsnap Kannada

The World at your finger tips!

thumkuru bike

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು

Spread the love

ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬಳುವ ನೇರಳು ಗೇಟ್​​​ ಬಳಿ ಸಂಭವಿಸಿದೆ

ಜೀಪ್​​ಗೆ ಬೈಕ್​​ ಡಿಕ್ಕಿಯಾಗಿ ಸಂಭವಿಸಿದ ಈ ಅಪಘಾತದಲ್ಲಿ ನಾಗರಾಜು(60) ಚಿದಾನಂದ(45) ಸಾವನ್ನಪ್ಪಿದ್ದಾರೆ.

ಬಳುವ ನೇರಳು ಗೇಟ್​ ಬಳಿ ಹೊನ್ನವಳ್ಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸವಾರ ಬೈಕ್​​ ಬೇರೆಡೆಗೆ ತಿರಿಗಿಸಲು ಮುಂದಾಗಿದ್ದಾನೆ.

ಕೂಡಲೇ ಎದುರಿಗೆ ಬರುತ್ತಿದ್ದ ಜೀಪ್​​ಗೆ ಬೈಕ್​​ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸಂಭವಿಸಿದ ಅಪಘಾತದ ರಬಸಕ್ಕೆ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.

ಇನ್ನು, ಬೈಕ್​​ನಲ್ಲಿ ತಿಪಟೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳದಲ್ಲಿ ನೂರಾರು ಜನ ಸೇರಿದ್ದು, ಇದಕ್ಕೆಲ್ಲಾ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!