February 25, 2026

Newsnap Kannada

The World at your finger tips!

avali

ಮಂಡ್ಯದ ಅರಕೆರೆಯಲ್ಲಿ ಆತ್ಮಹತ್ಯೆಗೆ ಶರಣಾದ ಅವಳಿ ಸಹೋದರಿಯರು

Spread the love

ಬೇರೆ ಬೇರೆ ಮನೆಗೆ ಮದುವೆಯಾಗಿ ಬೇರಾಗಲು ಇಷ್ಟವಿಲ್ಲದ ಅವಳಿ ಸಹೋದರಿಯರಿಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಸಮೀಪದ ಅರಕೆರೆ ಸಮೀಪದ ಗ್ರಾಮದಲ್ಲಿ ಜರುಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಸುರೇಶ್ ಮತ್ತು ಯಶೋಧ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಮತ್ತು ದಿವ್ಯ (19) ಆತ್ಮಹತ್ಯೆ ಮಾಡಿಕೊಂಡವರು.

ಈ ಇಬ್ಬರು ಅವಳಿ ಸಹೋದರಿಯರು ಚಿಕ್ಕಂದಿನಿಂದ ಬಹಳ ಅನ್ಯೋನ್ಯತೆಯಿಂದ ಇದ್ದರು.‌ ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬೇರೆ ಬೇರೆ ಹುಡುಗರನ್ನು ಮದುವೆ ಯಾದರೆ ತಮ್ಮ ಬಾಂಧವ್ಯ ಕೊನೆಯಾಗುತ್ತದೆ ಎಂದು ನಿರ್ಧರಿಸಿ ನಿನ್ನೆ ಸಂಜೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಅರಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!