November 18, 2024

Newsnap Kannada

The World at your finger tips!

Facebook,whatsapp,ciber crime

Fake Fb account, WhatsApp message in DC name; demanded money ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ, ವಾಟ್ಸಪ್ ಮೆಸೇಜ್; ಹಣಕ್ಕೆ ಕಿಡಿಗೇಡಿಗಳಿಂದ ಬೇಡಿಕೆ

ಟ್ರಂಪ್ ಪರ ಪ್ರಚಾರ: 276 ನಕಲಿ ಫೇಸ್‌ಬುಕ್ ಖಾತೆಗಳು ರದ್ದು

Spread the love

ಅಮೇರಿಕಾದಲ್ಲಿ ನವೆಂಬರ್‌ನಲ್ಲಿ ನಡೆಯುವ ಚುಣಾವಣೆಯ ಹಿನ್ನೆಲೆಯಲ್ಲಿ ಡೋನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡುತ್ತಿದ್ದ 276 ನಕಲಿ ಖಾತೆಗಳನ್ನು ಫೇಸ್‌ಬುಕ್ ರದ್ದು ಮಾಡಿದೆ. ಈ ಖಾತೆಗಳನ್ನು ಸೃಷ್ಠಿ ಮಾಡಿದ್ದ ರ್ಯಾಲಿ ಫೋರ್ಜ್ ಎಂಬ ಸಂಸ್ಥೆಯನ್ನು ಸಹ ಫೇಸ್‌ಬುಕ್ ಶಾಶ್ವತವಾಗಿ ರದ್ದು ಮಾಡಿದೆ.

ರ್ಯಾಲಿ ಫೋರ್ಜ್ ಸಂಸ್ಥೆ ಸೃಷ್ಥಿ ಮಾಡಿದ್ದ ಈ ನಕಲಿ ಖಾತೆಗಳು ಮುಂಬರುವ ಅಧ್ಯಕ್ಷೀಯ ಚುಣಾವಣೆಯಲ್ಲಿ ಮತದಾರರಿಗೆ ಟ್ರಂಪ್ ಪರ ಒಲವು ಬರುವಂತೆ ಮಾಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದರು.

ಪ್ರಸ್ತುತ ಈ ಸಂಸ್ಥೆಯನ್ನು ಫೇಸ್‌ಬುಕ್ ನಿಷೇಧ ಮಾಡಿದೆ. ಆದರೆ 2018ರ ಮಧ್ಯಂತರ ಚುಣಾವಣೆಯ ವೇಳೆಯಿಂದಲೇ ರ್ಯಾಲಿ ಫೋರ್ಜ್ ಸಂಸ್ಥೆ ಕೆಲಸ ನಿರ್ವಹಿಸುತ್ತಿತ್ತು. ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಹೊಗಳುವಂತಹ, ಮತದಾರರ ಒಲವನ್ನು ಸೆಳೆಯುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದ ಈ ಸಂಸ್ಥೆ, ಡೆಮಕ್ರಾಟಿಕ್ ಪಕ್ಷದ ಅಭ್ಯರ್ಥಿಗಳು ಮತ್ತು ಡೆಮಕ್ರಾಟಿಕ್ ಪಕ್ಷವನ್ನು ತೆಗಳುವಂತಹ ಪೋಸ್ಟ್‌ಗಳನ್ನು ಯಾವಗಲ್ಲೂ ಹಾಕುತ್ತಿತ್ತು.

‘ದಿ ವಾಷಿಂಗ್ಟನ್‌ ಪೋಸ್ಟ್’ ಕಳೆದ ತಿಂಗಳು ‘ಟರ್ನಿಂಗ್‌ ಪಾಯಿಂಟ್‌ ಆ್ಯಕ್ಷನ್’ ‘ ಸಂಸ್ಥೆಯು ಟ್ರಂಪ್‌ ಪರವಾದ ಸಂದೇಶಗಳು ಹಾಗೂ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲು ಯುವಕರನ್ನು ಹಣ ಕೊಟ್ಟು ಬಳಸಿಕೊಳ್ಳುತ್ತಿದೆ. ಇದು ಫೇಸ್‌ಬುಕ್‌ ನಿಯಮಕ್ಕೆ ವಿರುದ್ಧವಾಗಿದೆ ಎಂದು ವರದಿ ಮಾಡಿದ್ದ ಹಿನ್ನೆಲೆಯಲ್ಲಿ , ಇಂತಹ ಖಾತೆಗಳ ಬಗ್ಗೆ ಪರಿಶೀಲನೆ ನಡೆಸಿದ ಫೇಸ್‌ಬುಕ್ ಈ ನಿರ್ಣಯವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!