December 25, 2024

Newsnap Kannada

The World at your finger tips!

train

ಸಾರಿಗೆ ಮುಷ್ಕರದ ಹಿನ್ನೆಲೆ: ವಿಶೇಷ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ – ವೇಳಾಪಟ್ಟಿ ಬಿಡುಗಡೆ

Spread the love

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದ ಮನವಿ ವಿಶೇಷ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿ , ರೈಲುಗಳ ಸಂಚಾರದ ವೇಳಾ ಪಟ್ಟಿ ಯನ್ನು ಬಿಡುಗಡೆ ಮಾಡಿದೆ.

ನೈಋತ್ಯ ರೈಲ್ವೆ ಸರ್ಕಾರದ ಮನವಿಗೆ ಒಪ್ಪಿಗೆ ನೀಡಿದೆ. 9 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

  • ಯಶವಂತಪುರ-ಬೆಳಗಾವಿ ರೈಲು ಏ.9ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 9.10ಕ್ಕೆ ಬೆಳಗಾವಿ ತಲುಪಲಿದೆ. ರಾತ್ರಿ 10ಕ್ಕೆ ಯಶವಂತಪುರಕ್ಕೆ ಹೊರಡಲಿದೆ.
  • ಯಶವಂತಪುರ-ವಿಜಯಪುರ ರೈಲು ಏ.9ರಂದು ಸಂಜೆ 6.20ಕ್ಕೆ ವಿಜಯಪುರಕ್ಕೆ ಹೊರಡಲಿದೆ.
  • ಮೈಸೂರು-ಬೆಂಗಳೂರು ರೈಲು ಏ.9ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 2.30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹೊರಡಲಿದೆ.
  • ಏ. 9 ಮತ್ತು 10ರಂದು ಮೈಸೂರು-ಯಶವಂತಪುರ ವಿಶೇಷ ರೈಲು ಸಂಚಾರ ನಡೆಸಲಿದೆ. ಮೈಸೂರಿನಿಂದ ಬೆಳಗ್ಗೆ 8.25ಕ್ಕೆ ಮತ್ತು ಯಶವಂತಪುರದಿಂದ ಮಧ್ಯಾಹ್ನ 1.15ಕ್ಕೆ ರೈಲು ಹೊರಡಲಿದೆ.
  • ಮೈಸೂರು-ಬೀದರ್ ರೈಲು ಏಪ್ರಿಲ್ 9ರಂದು ರಾತ್ರಿ 8ಕ್ಕೆ ಮೈಸೂರಿನಿಂದ ಮತ್ತು ಮರುದಿನ ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡಲಿದೆ.
  • ಯಶವಂತಪುರ-ಬೀದರ್ ರೈಲು (ಕಲಬುರಗಿ ಮಾರ್ಗ) ಏಪ್ರಿಲ್ 10ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಮತ್ತು ಮರುದಿನ ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡಲಿದೆ.
Copyright © All rights reserved Newsnap | Newsever by AF themes.
error: Content is protected !!