February 22, 2026

Newsnap Kannada

The World at your finger tips!

minister

ಸಾರಿಗೆ ಬಸ್ ಢಿಕ್ಕಿ – ಮುಜರಾಯಿ ಸಚಿವರ ಕಾರು ಜಖಂ – ಪ್ರಾಣಾಪಾಯದಿಂದ ಪಾರು‌

Spread the love

ಬೆಂಗಳೂರಿನ ನೈಸ್ ರಸ್ತೆಯಲ್ಲಿ ರಾಜ್ಯ ಮುಜರಾಯಿ ಸಚಿವರ ಕಾರು ಅಪಘಾತವಾಗಿದೆ. ಕಾರು ಜಖಂಗೊಂಡಿದೆ. ಸಚಿವರು ಸಣ್ಣ ಪುಟ್ಟ ಗಾಯಗೊಂಡ ಅಪಾಯದಿಂದ ಪಾರಾಗಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿರುವಾಗ ನೈಸ್ ರಸ್ತೆ ಬಳಿ ಕಾರಿಗೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕಾರಿಗೆ ಡಿಕ್ಕಿ ಹೊಡೆಯಿತು.

ಈ ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಸಚಿವರು ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಂಬಳಗೋಡು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!