January 11, 2025

Newsnap Kannada

The World at your finger tips!

ksrtc

ಕೆಎಸ್ ಆರ್ ಟಿಸಿ ನೌಕರರಿಗೂ ಇನ್ನು ಮುಂದೆ ಅಂತರ್‌ ನಿಗಮಗಳ ವರ್ಗಾವಣೆ : ಸರ್ಕಾರ ಅಸ್ತು

Spread the love

ರಾಜ್ಯ ಸಾರಿಗೆ ನೌಕರರಿಗೆ ಅಂತರ್‌ ನಿಗಮಗಳ ವರ್ಗಾವಣೆಗೆ ಸರ್ಕಾರ ಅಸ್ತು ಎಂದಿದೆ.

ಈ ಕುರಿತಂತೆ ಬುಧವಾರ ಆದೇಶ ಹೊರಡಿಸಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಲಾಗಿದೆ.‌
ಈ ನಿರ್ಧಾರ ದಿಂದ ಸುಮಾರು 20-25 ಸಾವಿರ ನೌಕರರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.

  • ಮಾತೃಸಂಸ್ಥೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ವೃಂದದ ಖಾಯಂ ನೌಕರರಿಗೆ ನಿಬಂಧನೆಗಳಿಗೆ ಒಳಪಟ್ಟ ಅಂತರ್‌ ನಿಗಮಗಳ ವರ್ಗಾವಣೆ ಭಾಗ್ಯ
  • ಪ್ರತೀ ವರ್ಷ ಎ.1 ರಿಂದ 30ರ ವರೆಗೆ ಈ ಪ್ರಕ್ರಿಯೆ ನಡೆಸಲಾಗುವುದು.

” ವರ್ಷದಲ್ಲಿ ಒಟ್ಟು ಸಿಬಂದಿ ಪ್ರಮಾಣದ ಶೇ. 2ರಷ್ಟು ಮಂದಿಯ ವರ್ಗಾವಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು, 6ನೇ ವೇತನ ಪರಿಗಣನೆ ಸಹಿತ ಒಂಬತ್ತು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರು.

Copyright © All rights reserved Newsnap | Newsever by AF themes.
error: Content is protected !!