ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, 11 ಮಂದಿ ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ಸ್ಥಳಾಂತರ ನಿಯುಕ್ತಿ ಮಾಡಿರುವಂತೆ ಆದೇಶ ಹೊರಡಿಸಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅವರ ಹೆಸರಿನ ಮುಂದೆ ಉಲ್ಲೇಖಿಸಿರುವ ಸ್ಥಳಕ್ಕೆ ವರ್ಗಾಯಿಸಲಾಗಿದೆ.
ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಸೂಚನೆ:
- ಮೇಲ್ಕಂಡ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು.
- ಅಧಿಕಾರಿಗಳು ಯಾವುದೇ ಡ್ಯೂಟಿ ಸೇರುವಿಕೆ ಕಾಲವನ್ನು ಉಪಯೋಗಿಸದೆ, ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ತಕ್ಷಣವೇ ವರದಿ ಮಾಡಿಕೊಳ್ಳಬೇಕು.
- ಅಧಿಕಾರಿಗಳು ಬಿಡುಗಡೆಗೊಂಡ ಸಮಯ ಮತ್ತು ಹೊಸ ಸ್ಥಳದಲ್ಲಿ ವರದಿ ಮಾಡಿದ ಬಗ್ಗೆ ಆಡಳಿತ ಕಛೇರಿಗೆ ಪಾಲನಾ ವರದಿ ಸಲ್ಲಿಸಬೇಕು.
ವರ್ಗಾವಣಾ ಆದೇಶದಲ್ಲಿ ಹೊಸ ಸ್ಥಳ ನಿಯುಕ್ತಿ ನೀಡದಿರುವ ಡಿವೈಎಸ್‌ಪಿ ವೃಂದದ ಅಧಿಕಾರಿಗಳು ಮುಂದಿನ ಆದೇಶಕ್ಕಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡಬೇಕಾಗಿ ತಿಳಿಸಲಾಗಿದೆ.ಇದನ್ನು ಓದಿ -MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್‌ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
More Stories
MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್‌ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ