December 25, 2024

Newsnap Kannada

The World at your finger tips!

train ,railway,india

ಆಂಧ್ರದ ಶ್ರೀಕಾಕುಳಂನಲ್ಲಿ ರೈಲು ಅಪಘಾತ: ಐವರು ಬಲಿ

Spread the love

ಆಂಧ್ರಪ್ರದೇಶದಲ್ಲಿ ಕೊನಾರ್ಕ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ದಾರುಣವಾಗಿ ಮೃತಪಟ್ಟಿದ್ದಾರೆ.

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಬಟುವಾ ಗ್ರಾಮದ ಬಳಿ ಸೋಮವಾರ ತಡರಾತ್ರಿ ಈ ಅವಘಡ ಸಂಭವಿಸಿದೆ.

ಕೊಯಮತ್ತೂರು- ಸಿಲ್ಚಾರ್ ಎಕ್ಸ್‍ಪ್ರೆಸ್ ರೈಲಿನಿಂದ ಸಿಗಡಮ್ -ಚಿಪುರುಪಲ್ಲಿ ನಿಲ್ದಾಣಗಳ ನಡುವೆ ಇಳಿದು ಪಕ್ಕದ ಹಳಿಯತ್ತ ಪ್ರಯಾಣಿಕರು ಓಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅದೇ ಹಳಿಯಲ್ಲಿ ವೇಗವಾಗಿ ಬಂದ ಭುವನೇಶ್ವರ-ಮುಂಬೈ ಕೊನಾರ್ಕ್ ರೈಲು, ಹಳಿಯ ಮೇಲಿದ್ದ ಪ್ರಯಾಣಿಕರ ಮೇಲೆ ಹರಿದಿದೆ.

ಈ ಪರಿಣಾಮ 5 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಐವರ ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿ ಶ್ರೀಕಾಕುಳಂ ಜಿ. ಆರ್ ರಾಧಿಕಾ ಹೇಳಿದ್ದಾರೆ

ವಿಶಾಖಪಟ್ಟಣ-ಪಲಾಸ ಮುಖ್ಯ ಮಾರ್ಗದ ಮಧ್ಯಭಾಗದಲ್ಲಿ ಘಟನೆ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!