December 27, 2024

Newsnap Kannada

The World at your finger tips!

ರಷ್ಯಾ ರಾಕೆಟ್ ದಾಳಿಗೆ ಉಕ್ರೇನಿಯನ್ ಜನಪ್ರಿಯ ನಟಿ ದುರಂತ ಸಾವು

Spread the love

ರಷ್ಯಾ ಹಾಗೂ ಉಕ್ರೇನ್ ನಡುವಿನ ಭೀಕರ ಸಂಘಷ೯ 23ನೇ ದಿನಕ್ಕೆ ಕಾಲಿಟ್ಟಿದೆ.

ಇದೀಗ ರಷ್ಯಾದ ರಾಕೆಟ್ ದಾಳಿಗೆ ಉಕ್ರೇನಿನ ಜನಪ್ರಿಯ ನಟಿಯೊಬ್ಬರು ದುರಂತ ಸಾವು ಕಂಡಿದ್ದಾರೆ.

ಈ ನಟಿಯನ್ನು ಒಕ್ಸಾನಾ ಶ್ವೇಟ್ಸ್‍ನ್ನು(67) ಎಂದು ಗುರುತಿಸಲಾಗಿದೆ. ಕೀವ್‍ನ ರೆಸಿಡೆನ್ಶಿಯಲ್ ಕಟ್ಟಡದ ಮೇಲಾದ ರಾಕೆಟ್ ದಾಳಿಯಲ್ಲಿ ಇವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಒಕ್ಸಾನಾಗೆ ಸ್ಥಳೀಯ ಸರ್ಕಾರ ಉಕ್ರೇನ್‍ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ‘ಉಕ್ರೇನ್‍ನ ಗೌರವಾನ್ವಿತ ಕಲಾವಿದೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು.

ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡ್ತಿವೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಇಂದು ಮರಿಯುಪೋಲ್‍ನ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ಹಾಕಿದ್ದು, ರಕ್ತದೋಕುಳಿಯೇ ಹರಿದಿದೆ. ಇಲ್ಲಿ ಮಕ್ಕಳು ಸೇರಿ, 1,200ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಡ್ನಾಪ್ ಆಗಿದ್ದ ಮೆಲಿಟಪೋಲ್ ಮೇಯರ್ ಅವರನ್ನು ರಷ್ಯಾ ರಿಲೀಸ್ ಮಾಡಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದ 9 ಸೈನಿಕರನ್ನು ಉಕ್ರೇನ್ ಬಿಡುಗಡೆ ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!