January 11, 2025

Newsnap Kannada

The World at your finger tips!

electricity

ವಿದ್ಯುತ್ ಸ್ಪರ್ಶದಿಂದ ನಾಲ್ವರು ಯುವಕರ ದುರಂತ ಸಾವು

Spread the love

ಅಪಾರ್ಟ್​ಮೆಂಟ್​ ಉದ್ಘಾಟನೆಗೆ ಲೈಟಿಂಗ್ಸ್ ಹಾಕುವಾಗ ವಿದ್ಯುತ್ ಸ್ಪರ್ಶದದ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ ಆನೇಕಲ್ ತಾಲೂಕಿನ ಅತ್ತೀಬೆಲೆ ಬಳಿ ಇಂಡ್ಳಬೆಲೆ ಗ್ರಾಮದಲ್ಲಿ ಜರುಗಿದೆ.

ಈ ಘಟನೆಯಲ್ಲಿ ಆಕಾಶ್(30), ಮಹಾದೇವ್(35), ವಿಷಕಂಠ(35) ಮತ್ತು ವಿಜಯ್ ಸಿಂಗ್(30) ಸಾವನ್ನಪ್ಪಿದ್ದಾರೆ.

ಅನೇಕಲ್​​ನ ಅತ್ತಿಬೆಲೆ ಸಮೀಪದ ಇಂಡ್ಳಬೆಲೆಯಲ್ಲಿ ನಾಳೆ ಉದ್ಘಾಟನೆ ಆಗಬೇಕಿದ್ದ ಅಪಾರ್ಟ್​​ಮೆಂಟ್​ಗೆ ಲೈಟಿಂಗ್ಸ್​ ಹಾಕಲಾಗ್ತಿತ್ತು.

ಈ ವೇಳೆ ನೌಕರರು ಕರೆಂಟ್ ಕಂಬದಿಂದ ಕರೆಂಟ್ ಲೈನ್ ಎಳೆದುಕೊಂಡು ಟೆಸ್ಟ್ ಮಾಡುತ್ತಿದ್ದಾಗ ವಿದ್ಯುತ್​ ಸ್ಪರ್ಶಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಅತ್ತಿಬೆಲೆ‌ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!