ಪೊಲೀಸರು ಹಲವು ಜನರು ಗೋದಾಮಿನ ಒಳಗೆ ಸಿಲುಕಿರುವ ಶಂಕೆ ವ್ಯಕ್ತ ಪಡಿಸಿದ್ದು,11 ಜನರು ಸಾವನ್ನಪ್ಪಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಗ್ನಿ ಅವಘಡದ ಸ್ಥಳಕ್ಕೆ ಐದು ಆಂಬ್ಯುಲೆನ್ಸ್ ಆಗಮಿಸಿವೆ. ಐದು ಮೃತ ದೇಹಗಳನ್ನು ಪ್ರತ್ಯೇಕವಾಗಿ ರವಾನಿಸಲು ಸಿದ್ದತೆ ಮಾಡಲಾಗಿದೆ. ಸದ್ಯ ಐದು ಮೃತ ದೇಹಗಳು ಗುರುತು ಸಿಗದಹಾಗೇ ಸುಟ್ಟು ಕರಕಲಾಗಿವೆ.
ಪಟಾಕಿ ಗೋದಾಮು ನವೀನ್ ಎನ್ನುವವರಿಗೆ ಸೇರಿದ್ದು, ಇಂದು ಮಧ್ಯಾಹ್ನ ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆದ್ದಾರಿ ಪಕ್ಕದಲ್ಲಿಯೇ ಪಟಾಕಿ ಅಂಗಡಿಯನ್ನು ನಿರ್ಮಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಪಟಾಕಿ ಮಳಿಗೆ ಹೊತ್ತಿ ಉರಿದಿದೆ. ಇದರ ಜೊತೆಗೆ ನಾಲ್ಕೈದು ವಾಹನ, ಐದಾರು ಅಂಗಡಿಗಳು ಸುಟ್ಟು ಭಸ್ಮಗೊಂಡಿವೆ.‘ನವಯುಗ ರಾವಣ’: ನಡ್ಡಾ ವಿರುದ್ಧ ದೂರು
ಪಟಾಕಿ ಅಂಗಡಿಯ ಪಕ್ಕದಲ್ಲಿಯೇ ಇದ್ದ ಗೋದಾಮಿಗೂ ಬೆಂಕಿ ತಗುಲಿದೆ. ಪರಿಣಾಮ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು