February 21, 2026

Newsnap Kannada

The World at your finger tips!

sullya

ಸುಳ್ಯದಲ್ಲಿ ದುರಂತ :ಶೌಚಾಲಯದ ಗೋಡೆ ಕುಸಿದು ಇಬ್ಬರ ಸಾವು

Spread the love

ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವನ್ನಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಣ್ಮೂರುನಲ್ಲಿ ಜರುಗಿದೆ

ಬೀಪಾತುಮ್ಮ (60) ಹಾಗೂ ನೆಬಿಸಾ (45) ಮೃತ ದುರ್ದೈವಿಗಳು.

ಶೌಚಾಲಯದ ಗೋಡೆ ದುರಸ್ತಿ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಕುಸಿದು ಬಿದ್ದ ಪರಿಣಾಮ ಈ ಅವಘಢ ಸಂಭವಿಸಿದೆ ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ
ಸಾವನ್ನಪ್ಪಿದ್ದಾರೆ

ಘಟನೆ ಸಂಬಂಧಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!