ಪಿರಿಯಾಪಟ್ಟಣ :ಪಿರಿಯಾಪಟ್ಟಣದ ಬಿ.ಎಂ.ರಸ್ತೆಯ ಬದಿಯಲ್ಲಿ ಇರುವ ಅರಸನ ಕೆರೆಗೆ ವ್ಯಕ್ತಿಯೊಬ್ಬ ಬಿದ್ದು ಸಾವನಪ್ಪಿರುವ ಘಟನೆ ಜರುಗಿದೆ.
ಪಿರಿಯಾಪಟ್ಟಣ ತಾಲೂಕಿನ ಚಿಕ್ಕಬೇಲಾಳು ಗ್ರಾಮದ ಪುಟ್ಟೇಗೌಡ (೩೫) ಎಂಬಾತನೆ ಸಾವಿಗೀಡಾಗಿದ್ದಾನೆ.
ಈತ ಬೆಂಗಳೂರಿನ ನಂದಿನಿ ಪಾರ್ಲರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಜ.೨೮ರಂದು ಬೆಂಗಳೂರಿನಿಂದ ಕಾಣೆಯಾಗಿದ್ದು ಈ ಬಗ್ಗೆ ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈತ ಪಿರಿಯಾಪಟ್ಟಣಕ್ಕೆ ಆಗಮಿಸಿ ಬಹಿರ್ದೆಸೆಗೆ ತೆರಲಿ ನೀರುತೆಗೆದುಕೊಳ್ಳಲು ಕೆರೆಯ ಬಳಿ ಹೋದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನಪ್ಪಿರುತ್ತಾನೆ ಎಂದು ಮೃತ ತಂದೆ ಮಾದೇಗೌಡ ದೂರಿನಲ್ಲಿ ತಿಳಿಸಿದ್ದಾರೆ.ಫೆ.2 ರಂದು ಸಿಎಂ ಸಿದ್ದರಾಮಯ್ಯ ರವರಿಂದ ಹಂಪಿ ಉತ್ಸವಕ್ಕೆ ಚಾಲನೆ
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ದೂರುದಾಖಲಿಸಿಕೊಂಡು ಕೆರೆಯಲ್ಲಿ ಇದ್ದ ಮೃತದೇಹವನ್ನು ಹೊರ ತೆಗೆದು ಮರಣೊತ್ತರ ಪರೀಕ್ಷೆ ನಡೆಸಿದರು
More Stories
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ