January 16, 2025

Newsnap Kannada

The World at your finger tips!

5 days child

ನಾಗಮಂಗಲದಲ್ಲಿ ದುರಂತ -ಅಪ್ಪ- ಅಮ್ಮ ಕೊರೋನಾಗೆ ಬಲಿ : ಐದು ದಿನದ ಮಗು ಅನಾಥ

Spread the love

ಹೆಣ್ಣು ಮಗುವೊಂದು ಜನಿಸಿ ಕೇವಲ ಐದು ದಿನಗಳಲ್ಲಿ ಅಪ್ಪ – ಅಮ್ಮನಿಲ್ಲದೇ ಅನಾಥವಾದ ಘಟನೆ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಈ ಮಗುವಿನ ತಂದೆ ನಂಜುಂಡೇಗೌಡ (45) ಕಳೆದ15 ದಿನಗಳ ಹಿಂದೆ ಕರೋನಾ ಗೆ ಬಲಿಯಾಗಿದ್ದರು. ತಾಯಿ ಮಮತಾ ( 31)ಮಗುವಿನ ಜನ್ಮ ನೀಡಿ ಐದೇ ದಿನದಲ್ಲಿ ಕೊರೋನಾಗೆ ತುತ್ತಾಗಿದ್ದಾರೆ. ಹೀಗಾಗಿ ಮಗು ಅಪ್ಪ- ಅಮ್ಮನನ್ನು ಕಳೆದುಕೊಂಡ ಐದುದಿನಕ್ಕೆ ಅನಾಥವಾಗಿದೆ.‌

ನಂಜುಂಡೇಗೌಡರು ಪೈನಾನ್ಸ್ ಮಾಡಿಕೊಂಡಿದ್ದರು. ಕಳೆದ ಏಪ್ರಿಲ್ ಕೊನೆ ವಾರದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಏ. 30 ರಂದು ಸಾವನ್ನಪ್ಪಿದರು.

ನಂತರ ತುಂಬು ಗರ್ಭಿಣಿಯಾಗಿದ್ದ ಮಮತಾಗೂ ಕೊರೋನಾ ಸೋಂಕು ತಗಲಿತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ನಾಗಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ನಡುವೆ ಮೇ 11 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿ, ನಿನ್ನೆ ಸಂಜೆ ಕೊರೊನಾ ಗೆ ತಾಯಿಯೂ ಬಲಿಯಾದರು.

ಮದುವೆಯಾಗಿ 9 ವರ್ಷಗಳ ಕಾಲ ದಂಪತಿಗಳಿಗೆ ಮಕ್ಕಳಾಗಿರಲ್ಲ.‌ ಮಕ್ಕಳ ಭಾಗ್ಯ ಸಿಗುವ ಹೊತ್ತಿನಲ್ಲಿ ಅಪ್ಪ ಅಮ್ಮ ನಿಗೆ ಬದುಕುವ ಅವಕಾಶವನ್ನು ದೇವರು ಕಿತ್ತುಕೊಂಡಿದ್ದಾನೆ ಎಂದು ಕುಟುಂಬದವರ ಆಕ್ರಂದನ ಹೆಚ್ಚಾಗಿದೆ.

Copyright © All rights reserved Newsnap | Newsever by AF themes.
error: Content is protected !!