ಕೋವಿಡ್-19 ಸೋಂಕಿಗೆ ಹೆದರಿ ಕುಟುಂಬದ ಐವರು ಸದಸ್ಯರೊಂದಿಗೆ ವಿಷ ಸೇವಿಸಿದ ತಾಯಿ ಹಾಗೂ ಆಕೆಯ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ಸೋಂಕಿನ ಭಯದಿಂದ ಮಹಿಳೆ, ಆಕೆಯ ತಾಯಿ ಹಾಗೂ ಸಹೋದರರು ಸೇರಿದಂತೆ ಕುಟುಂಬದ 5 ಜನರು ವಿಷ ಸೇವಿಸಿದ್ದಾರೆ.
ವಿಷ ಸೇವಿಸಿದವರಲ್ಲಿ ಮೂವರು ಬದುಕುಳಿದಿದ್ದಾರೆ ಮಹಿಳೆ ಹಾಗೂ ಆಕೆಯ ಮಗು ಸಾವನ್ನಪ್ಪಿದೆ.
ಮೃತ ಮಹಿಳೆ ಜ್ಯೋತಿಕಾ(23)ಳ ತಂದೆ 2021ರ ಡಿಸೆಂಬರ್ ತಿಂಗಳಿನಲ್ಲಿ ಸಹಜ ಸಾವನ್ನಪ್ಪಿದ್ದರು. ಇದರಿಂದ ಇಡೀ ಕುಟುಂಬವೇ ನೊಂದಿತ್ತು. ಜ್ಯೋತಿಕಾ ಕೂಡಾ ತನ್ನ ಪತಿಯಿಂದ ಬೇರ್ಪಟ್ಟು, ಮಗುವಿನೊಂದಿಗೆ ತನ್ನ ತವರು ಮನೆಯಲ್ಲಿ ವಾಸವಿದ್ದಳು.
ಜನವರಿ 8 ರಂದು ಜ್ಯೋತಿಕಾಳಿಗೆ ಕೋವಿಡ್ ಸೋಂಕು ತಗುಲಿರುವ ವಿಷಯ ತಿಳಿದು ಬಂದಿದೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿ, ಅದು ಹರಡುವ ಭೀತಿಯಿಂದ ಮನೆಯವರು ವಿಷ ಸೇವಿಸಿದ್ದಾರೆ.
ವಿಷ ಸೇವಿಸಿದ ವಿಚಾರ ನೆರೆಹೊರೆಯವರಿಗೆ ಮರುದಿನ ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಜ್ಯೋತಿಕಾ ಹಾಗೂ ಆಕೆಯ ಮಗು ಸಾವನ್ನಪ್ಪಿದ್ದಾರೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಇಂದಿನಿಂದ ರಾಜ್ಯದಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಆರಂಭ
ಕೋವಿಡ್ ಬಗ್ಗೆ ಜಿಲ್ಲೆಯ ಜನರು ಮುಂಜಾಗ್ರತೆವಹಿಸಿ: ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ
ಮಾಸ್ಕ್ ಧರಿಸಿ ಬಸ್ ಗಳಲ್ಲಿ ಪ್ರಯಾಣಿಸಿ : ಸಚಿವ ರಾಮಲಿಂಗಾ ರೆಡ್ಡಿ