December 26, 2024

Newsnap Kannada

The World at your finger tips!

mandya

ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ದುರಂತ : 1 ವರ್ಷದ ಮಗು ಕಣ್ಣೆದುರೆ ನೇಣಿಗೆ ಶರಣಾದ ತಾಯಿ

Spread the love

1 ವರ್ಷದ ಮಗು ಮುಂದೆಯೇ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ಜರುಗಿದೆ

ಕವಿತಾ (36) ಮನೆಯಲ್ಲಿ ನೇಣಿಗೆ ಶರಣಾದ ಮಹಿಳೆ ಈ ಗಂಡ ಕೆಲಸಕ್ಕೆ ಹೋಗಿದ್ದ ವೇಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ

ಇದನ್ನು ಓದಿ – CET, NEET, JEE, ಪರೀಕ್ಷೆ ಬರೆಯುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ – ಸಿಎಂ ಬೊಮ್ಮಾಯಿ

ಮಗುವಿಗೆ ಕಟ್ಟಿದ್ದ ಜೋಕಾಲಿಗೆ ನೇಣು ಬಿಗಿದು ಕೊಂಡ ನಂತರ ಸತತ 3 ಗಂಟೆ ಕಂದಮ್ಮನ ಚೀರಾಟ ಮಾಡಿದೆ ನಿನ್ನೆ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೂ ತಾಯಿ ಶವದ ಮುಂದೆ ಮಗು ಅಳುವು ಕೇಳಿ ಅಕ್ಕಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ

ಕವಿತಾ 9 ವರ್ಷದ ಹಿಂದೆ ರವಿಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ದೈಹಿಕ ಶಿಕ್ಷಕರಾಗಿರುವ ರವಿಕುಮಾರ್. ಕವಿತಾ ರವಿಕುಮಾರ್‌ ದಂಪತಿಗೆ 7 ವರ್ಷದ ಗಂಡು ಮಗು, 1 ವರ್ಷದ ಹೆಣ್ಣು ಮಗು ಇದೆ.

ನಿನ್ನೆ ಬೆಳಗ್ಗೆ ರವಿಕುಮಾರ್ ಕೆಲಸಕ್ಕೆ ತೆರಳಿದ ನಂತರ , ದೊಡ್ಡ ಮಗು ಶಾಲೆಗೆ ಹೋಗಿತ್ತು. ಪತ್ನಿಯ
ಆತ್ಮಹತ್ಯೆ ಸುದ್ದಿ ಕೇಳಿ ಶಾಲೆಯಿಂದ ಬಂದ ರವಿಕುಮಾರ್ ಬಂದು ಪೋಲಿಸರಿಗೆ ದೂರು ನೀಡಿದ್ದಾರೆ

ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Copyright © All rights reserved Newsnap | Newsever by AF themes.
error: Content is protected !!