February 22, 2026

Newsnap Kannada

The World at your finger tips!

coviddeath

ಹೊಸಪೇಟೆ ಯಲ್ಲಿ ದುರಂತ: 10 ದಿನದಲ್ಲಿ ಕಾಂಗ್ರೆಸ್ ನಾಯಕಿ‌ ಸೇರಿ ಒಂದೇ ಕುಟುಂಬದ ಮೂವರು‌ ಸಾವು

Spread the love

ರಾಜ್ಯ ಮಹಿಳಾ‌ ಕಾಂಗ್ರೆಸ್ ನಾಯಕಿಯೂ ಸೇರಿ ಹತ್ತು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿಯಾಗಿರುವ ಘಟನೆ ಹೊಸಪೇಟೆಯಲ್ಲಿ ಜರುಗಿದೆ.‌

ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಲೂಸಿಯಾ ಸ್ಮಿತ್ (45) ಹಾಗೂ ಈಕೆಯ ಸಹೋದರ ಸಾವಿಯೋ‌ ಸ್ಮಿತ್ (42) ಹತ್ತು ದಿನಗಳ ಹಿಂದೆ ಕೊರೋನಾಗೆ ಬಲಿಯಾಗಿದ್ದರು.‌

ಕೇವಲ‌10 ದಿನಗಳಲ್ಲಿ ತಮ್ಮ‌ಇಬ್ಬರು ಮಕ್ಕಳನ್ನು ಕಳೆದುಕೊಂಡ ‌ತಂದೆ ಬೇರಿ ಸ್ಮಿತ್ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ.‌

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದ ಲೂಸಿಯಾ ಸ್ಮಿತ್, ಹೊಸಪೇಟೆಯಲ್ಲಿ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲಿ‌ ಸೇವೆ ಸಲ್ಲಿಸುತ್ತಿದ್ದರು ಅಲ್ಲದೇ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯಕ್ರಮದ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದರು.‌

error: Content is protected !!