December 26, 2024

Newsnap Kannada

The World at your finger tips!

, suicide , mother , crime

ಬೆಂಗಳೂರಿನಲ್ಲಿ ದುರಂತ- 19ನೇ ಮಹಡಿಯಿಂದ ಜಂಪ್ : ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Spread the love

ಮಾನಸಿಕ ರೋಗದಿಂದ ಬಳಲಿದ ಮಹಿಳೆಯೊಬ್ಬಳು 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಚರಿಷ್ಮಾ (40) ಎಂಬಾಕೆ ಮೃತ ಮಹಿಳೆ. ಈ ಮಹಿಳೆಯು ಪೂರ್ವ ಹೈಲ್ಯಾಂಡ್ ಅಪಾರ್ಟ್ಮೆಂಟ್​​ನ 19ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಿಜೆಪಿಗೆ ಸೆಡ್ಡು ಹೊಡೆದ ಬಳ್ಳಾರಿ ರೆಡ್ಡಿ – ಕಲ್ಯಾಣ ರಾಜ್ಯ ಪ್ರಗತಿ ಪಕ್ಷ. ಸ್ಥಾಪನೆ

ಕೆಲ ದಿನಗಳಿಂದ ಡಿಪ್ರೆಶನ್​ಗೆ ಹೋಗಿದ್ದರು. ಹೀಗಾಗಿ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!