December 23, 2024

Newsnap Kannada

The World at your finger tips!

sucide

ಬೆಂಗಳೂರಿನ ತಿಗರುಪಾಳ್ಯ‌ದಲ್ಲಿ ದುರಂತ : ಕೌಟುಂಬಿಕ ಕಲಹ – ಐವರು‌ ಆತ್ಮಹತ್ಯೆ

Spread the love

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.‌

ಭಾರತಿ (50) ಸಿಂಚನ‌(33) ಸಿಂಧೂರಾಣಿ ( 30) ಮಧೂಸಾಗರ್ (26) ಆತ್ಮಹತ್ಯೆ ಮಾಡಿಕೊಂಡರೆ 9 ತಿಂಗಳ ಮಗು‌ ಆಹಾರವಿಲ್ಲದೆ ಸಾವನ್ನಪ್ಪಿದೆ. ಮತ್ತೊಂದು 3 ವರ್ಷದ ಮಗು 5 ದಿನಗಳಿಂದ ಆಹಾರ ವಿಲ್ಲದೇ ಇದ್ದರೂ ಪವಾಡ ಸದೃಶವಾಗಿ ಬದುಕುಳಿದಿದೆ.

ವಾರ ಪತ್ರಿಕೆ ಯೊಂದರ ಸಂಪಾದಕರಾಗಿರುವ ಭಾರತಿ ಪತಿ,‌ ಶಂಕರ್ ಎಂಬುವವರು ,‌ ಮದುವೆ ಮಾಡಿಕೊಂಡಿದ್ದ ಮಗಳೊಬ್ಬಳು ಗಂಡ ಮನೆ ಬಿಟ್ಟು ಬಂದ ಕಾರಣಕ್ಕಾಗಿ ಗಲಾಟೆ ಮಾಕೊಂಡು ಕಳೆದ 5 ದಿನಗಳಿಂದ ಮನೆ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದೆ.

ತಿಗರಪಾಳ್ಯದಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಶರಣಾಗಲು ಇನ್ನೂ ನಿರ್ದಿಷ್ಟ ಕಾರಣಗಳು ತಿಳಿದು ಬರಬೇಕಾಗಿದೆ.

ಮನೆಯ ಹಾಲ್ ನಲ್ಲಿ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೇ, ಮಗಳು ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ .

ಬೆಂಗಳೂರಿನ ಪಶ್ಚಿಮ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಸ್ಥಳಕ್ಕೆ ಭೇಟಿ‌ ನೀಡಿದ್ದರು.

Copyright © All rights reserved Newsnap | Newsever by AF themes.
error: Content is protected !!