November 15, 2024

Newsnap Kannada

The World at your finger tips!

download

ಟಯೋಟಾ ಸಮಸ್ಯೆ : ಕಾರ್ಮಿಕ ಇಲಾಖೆಯ ನಿಷೇಧದ ನಡುವೆಯೂ ಲಾಕ್ಔಟ್

Spread the love

ಬಿಡದಿಯ ಟಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಲಿಮಿಟೆಡ್‌ ನಲ್ಲಿ ಕಾರ್ಮಿಕ ಮತ್ತು ಆಡಳಿತ ಮಂಡಳಿ ನಡುವೆ ಉದ್ಭವಿಸಿರುವ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಸಚಿವ ಶಿವರಾಂ ಹೆಬ್ಬಾರ್ ಆದೇಶದಂತೆ ಕಾರ್ಮಿಕ ಇಲಾಖೆ ಹತ್ತು ಹಲವು ಪ್ರಯತ್ನಗಳು ಮುಂದುವರೆದಿವೆ.

ಕಳೆದ ನವೆಂಬರ್ 9ರಂದು ಕಾರ್ಮಿಕರ ಸಂಘಟನೆ ಪದಾಧಿಕಾರಿಗಳನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದ ಮೇಲೆ ದಿಢೀರ್ ಮುಷ್ಕರ ಆರಂಭಿಸಿದ್ದರು.

ಆಡಳಿತ ಮಂಡಳಿ ಸಹ ತಕ್ಷಣ ನ. 10ರಂದು ಲಾಕ್ಔಟ್ ಘೋಷಿಸುವ ಮೂಲಕ ಸಂಸ್ಥೆಯ ಕಾರ್ಯಕಲಾಪ ಗಳನ್ನು ಸ್ಥಗಿತಗೊಳಿಸಿತ್ತು. ಈ ಬೆಳವಣಿಗೆಯ ತೀವ್ರತೆಯನ್ನು ಅರಿತಿದ್ದ ಕಾರ್ಮಿಕ ಇಲಾಖೆ ಕೂಡಲೇ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತು.

ಡಿ. 18ರಂದು ಆಡಳಿತ ಮಂಡಳಿ ಲಾಕ್ಔಟ್ ತೆರವುಗೊಳಿಸಿ 19ರಿಂದ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಪುನಃ ಆಡಳಿತ ಮಂಡಳಿ ಘಟಕದಲ್ಲಿ ಅಶಾಂತಿಯ ವಾತಾವರಣದ ಕಾರಣ ನೀಡಿ ಲಾಕ್ಔಟ್ ಘೋಷಿಸಿತು.

ಆದರೆ ಎರಡನೇ ಬಾರಿಯ ಲಾಕ್ಔಟ್ ನೋಟಿಸ್ ನಲ್ಲಿ ಟಯೋಟಾ ಆಡಳಿತ ಮಂಡಳಿಯು ಷರತ್ತುಬದ್ಧ ಒಪ್ಪಿಗೆ ಪತ್ರ ಸಲ್ಲಿಸುವ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ ಮಾಡಿಕೊಟ್ಟಿದೆ. ಇದರ ಪರಿಣಾಮ ಸುಮಾರು 1000 ಕಾರ್ಮಿಕರು ಕಾರ್ಖಾನೆಯಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದರು.

ಈ ನಡುವೆ, ಕಾರ್ಖಾನೆ ಆಡಳಿತ ಮಂಡಳಿಯು ಕರ್ತವ್ಯಲೋಪ ಮತ್ತು ಅಶಿಸ್ತಿನ ಕಾರಣ ನೀಡಿ 69 ಕಾರ್ಮಿಕರನ್ನು ಅಮಾನತು ಗೊಳಿಸಿದರು.‌ ಇಲಾಖಾ ವಿಚಾರಣೆ ಬಾಕಿ ಇದ್ದು, ಕಾನೂನು ಪ್ರಕಾರ ನಿಷೇಧಿತ ಲಾಕ್ಔಟ್ ಮತ್ತು ಮುಷ್ಕರ ಶಿಕ್ಷಾರ್ಹ ಅಪರಾಧವಾಗಿದೆ, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಕಾರ್ಮಿಕ ಸಂಘಟನೆಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ಹೂಡಲು ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ವಿಚಾರಣೆ ನಿಗಧಿಪಡಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!