January 16, 2025

Newsnap Kannada

The World at your finger tips!

dam,rain,water

ಕೆಆರ್​ಎಸ್ ಡ್ಯಾಂ ತುಂಬಾ ಸೇಫ್ – ಬಿರುಕಿಲ್ಲ; ಗೊಂದಲಕ್ಕೆ ತೆರೆ ಎಳೆದ ಕಾವೇರಿ ನೀರಾವರಿ ನಿಗಮ

Spread the love

ಕೆಆರ್​ಎಸ್ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ. ಸೇಫ್ ಆಗಿದೆ ಎಂದು ಅಧಿಕೃತ ಮಾಹಿತಿ ನೀಡಿದೆ.

ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾದ ವದಂತಿಗೆ ಕಾವೇರಿ ನೀರಾವರಿ ನಿಗಮ ನಿಯಮಿತ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ವರದಿಯಾಗುತ್ತಿದೆ.. ಆದರೆ ಆ ವರದಿ ಸತ್ಯಕ್ಕೆ ದೂರವಾದ ಅಂಶವಾಗಿದೆ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತ ಎಂಡಿ ಕೆ. ಜೈಪ್ರಕಾಶ್​​ ಸ್ಪಷ್ಟನೆ ನೀಡಿದ್ದಾರೆ.

ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ತಂಡ ಕೆಆರ್​ಎಸ್ ಡ್ಯಾಂ ಅನ್ನ ಪರಿಶೀಲನೆ ಮಾಡಿತ್ತು. ಈ ವೇಳೆ ಬಾಡಿ ವಾಲ್​ನಲ್ಲಿ ಯಾವುದೇ ತರಹದ ಬಿರುಕಿಲ್ಲ ಅಂಶ ಬೆಳಕಿಗೆ ಬಂದಿದೆ. ಮಳೆಗಾಲದ ಮುನ್ನ ಹಾಗೂ ನಂತರ ಯಾವುದೇ ಬಿರುಕು ಕಂಡುಬಂದಿಲ್ಲ ಎಂದು ವರದಿಯಲ್ಲಿ ಅಧಿಕೃತವಾಗಿ ಉಲ್ಲೇಖಿಸಿದೆ.

Copyright © All rights reserved Newsnap | Newsever by AF themes.
error: Content is protected !!