ಟೊಮೆಟೋ ಬೆಲೆ ದಿಢೀರ್ ಕುಸಿತಗೊಂಡಿದ್ದು, ಕೋಲಾರ ಎಪಿಎಂಸಿ ಮಾರುಕಟ್ಟೆಯ ರೈತರಿಗೆ ಆತಂಕ ತಂದಿದೆ.
ಸೇಬುಹಣ್ಣಿಗಿಂತಲೂ ತುಟ್ಟಿಯಾಗಿದ್ದ ಟೊಮೋಟೊ
ಶುಕ್ರವಾರ ಮತ್ತು ಶನಿವಾರ ಬೆಲೆಯಲ್ಲಿ ದಿಢೀರ್ ಕುಸಿತ ಉಂಟಾಗಿದೆ
15 ಕೆಜಿ ಟೊಮೋಟೊಗೆ 400 ರಿಂದ 500 ರೂಪಾಯಿ ನಿಗದಿಯಾಗಿದೆ. 15 ಕೆಜಿ ಬಾಕ್ಸ್ ಟೊಮೆಟೋಗೆ ಗುರುವಾರ 800 ರಿಂದ 1000 ರೂಪಾಯಿ ಬೆಲೆ ಇತ್ತು.
ಆದರೆ ಶುಕ್ರವಾರ ಮತ್ತು ಶನಿವಾರ 400 ರಿಂದ 500 ರೂಪಾಯಿಗೆ ಕುಸಿದಿದೆ. ಇದರಿಂದಾಗಿ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ ಅಪಾರ ಬೆಳೆ ನಾಶವಾಗಿದ್ದು, ಟೊಮೆಟೋ ಬೆಲೆ ದಿಢೀರನೇ ಗಗನಕ್ಕೇರಿತ್ತು. ಇದರಿಂದಾಗಿ ಜನಸಾಮಾನ್ಯರು ತೀವ್ರ ಆತಂಕಕ್ಕೊಳಗಾಗಿದ್ದರು.
ಪ್ರತಿ ಕೆಜಿಗೆ ಟೊಮೆಟೋ ಬೆಲೆ 90-100 ರೂ.ಗಳಾಗಿದೆ ಜನಸಾಮಾನ್ಯರ ಪಾಲಿಗೆ ಇದು ಬಿಸಿ ತುಪ್ಪದಂತಾಗಿದೆ. ಹಾಪ್ ಕಾಮ್ಸ್‌ನಲ್ಲಿ ಒಂದು ಕೆಜಿ ಟೊಮ್ಯಾಟೋಗೆ 90 ರೂ. ಇತ್ತು, ಆನ್‍ಲೈನ್‍ನಲ್ಲಿ ಖರೀದಿಸುವವರಿಗೆ 98 ರೂಪಾಯಿ ಆಗಿದೆ. ಸೇಬಿಗಿಂತ ಟೊಮೆಟೋಗೆ ಅಧಿಕ ಬೆಲೆಯಾಗಿತ್ತು. ಆದರೀಗ ಟೊಮ್ಯಾಟೋ ಬೆಲೆ ಕುಸಿತ ಜನಸಾಮಾನ್ಯರಿಗೆ ಸಂತಸ ತಂದಿದ್ದರೆ, ರೈತರ ಪಾಲಿಗೆ ಬೇಸರ ತರಿಸಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ