ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

Team Newsnap
1 Min Read

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ.

ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ( YRSCP) ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುವನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದ್ದು , ಹಿಂದಿನ ಸರ್ಕಾರ ತಿರುಮಲ ಲಡ್ಡನ್ನು ಅಪವಿತ್ರಗೊಳಿಸಿದೆ ಎಂದು ಹೇಳಿದ್ದಾರೆ.

ಲಡ್ಡೂ ತಯಾರಿಕೆಗೆ ಕೆಳದರ್ಜೆಯ ವಸ್ತುಗಳನ್ನು ಬಳಸಲಾಗಿದ್ದು ,ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.

ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಶುದ್ಧ ತುಪ್ಪ ತಂದು ಲಡ್ಡು ಪ್ರಸಾದಕ್ಕೆ ಬಳಸುತ್ತಿದ್ದಾರೆ ಎಂದು ಹೇಳುತ್ತಾ ಹಿಂದಿನ ಸರ್ಕಾರದ ಕುರಿತಾಗಿ ಗ೦ಭೀರವಾದ ಆರೋಪ ಮಾಡಿದ್ದಾರೆ.

ಈ ಹಿಂದೆ ಸುರೇಂದರ್ ರೆಡ್ಡಿ ಸಮಿತಿಯು ಸರಬರಾಜು ಮಾಡಿದ ತುಪ್ಪ ಕಳಪೆ ಗುಣಮಟ್ಟದ್ದಾಗಿದೆ ಎಂದು ತೀರ್ಮಾನಿಸಿದ್ದು ,ಲಡ್ಡುಗಳ ಗುಣಮಟ್ಟ ಕಳಪೆಯಾಗಿರುವುದರಿಂದ ಭಕ್ತರು ಲಡ್ಡುಗಳ ಬಗ್ಗೆ ದೂರು ನೀಡಿದ್ದಾರೆ.

ಲಡ್ಡು ಪ್ರಸಾದದ ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ತುಪ್ಪವನ್ನು ಖರೀದಿಸಲು ಟಿಟಿಡಿ ಒಪ್ಪಂದಕ್ಕೆ ಸಹಿ ಹಾಕಿದ್ದು ,ಈ ಹಿಂದೆ 20 ವರ್ಷಗಳಿಂದ ಕರ್ನಾಟಕ ಹಾಲು ಒಕ್ಕೂಟವು ಟಿಟಿಡಿಗೆ ತುಪ್ಪವನ್ನು ಪೂರೈಸುತ್ತಿದೆ ಎಂದು ಹೇಳಿದ್ದಾರೆ.ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಟಿಟಿಡಿ ನಿಯಮಿತವಾಗಿ ಸುಮಾರು ಮೂರೂವರೆ ಲಕ್ಷ ಲಡ್ಡೂಗಳನ್ನು ಭಕ್ತರಿಗೆ ವಿತರಿಸುತ್ತಿದ್ದು, ಲಡ್ಡುವಿನ ಪಾವಿತ್ರ್ಯತೆ ಕಾಪಾಡಲು ಜನರು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Share This Article
Leave a comment