December 22, 2024

Newsnap Kannada

The World at your finger tips!

world cup , india , sports

ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಭಾರತದ ಸೆಮಿಫೈನಲ್ ನತ್ತ ಹೆಜ್ಜೆ

Spread the love

ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿ, ಫೀಲ್ಡರ್‌ಗಳ ಬೆಸ್ಟ್‌ ಫೀಲ್ಡಿಂಗ್‌ ಪರಿಣಾಮ ಮಳೆಯ ನಡುವೆಯೂ ಭಾರತ ತಂಡ ಬಾಂಗ್ಲಾ ವಿರುದ್ಧ 5 ರನ್‍ಗಳ ರೋಚಕ ಜಯ ಸಾಧಿಸಿದೆ.

1 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ ಮುಂದಿನ 24 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಪಂದ್ಯವನ್ನು ಕಳೆದುಕೊಂಡಿತು.ನಟ ಸೃಜನ್ ಲೋಕೇಶ್ ಟೀಂ – ಸಚಿವ ವಿ.ಸೋಮಣ್ಣ ಪುತ್ರನ ಮಧ್ಯೆ ಗಲಾಟೆ..?

ಕೊನೆಯ 6 ಎಸೆತಗಳಲ್ಲಿ ಬಾಂಗ್ಲಾ ಗೆಲುವಿಗೆ 20 ರನ್ ಬೇಕಾಯಿತು. ಆದರೆ ಅರ್ಷದೀಪ್ ಸಿಂಗ್ ಎಸೆದ ಕೊನೆಯ ಓವರ್‌ನ ಕೊನೆಯ ಎಸೆತಗಳಲ್ಲಿ 7 ರನ್ ಬೇಕಾಯಿತು. ಕೊನೆಯ ಎಸೆತದಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಭಾರತಕ್ಕೆ ಗೆಲುವು ತಂದುಕೊಟ್ಟರು.
ಭಾರತ ನೀಡಿದ 185 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಮಳೆ ಅಡಚಣೆಯಾಯಿತು. ಆ ಬಳಿಕ 16 ಓವರ್‌ಗಳಿಗೆ ಪಂದ್ಯವನ್ನು ಇಳಿಸಲಾಯಿತು.

54 ಎಸೆತಗಳಲ್ಲಿ 85 ರನ್ ಗುರಿ ಪಡೆದ ಬಾಂಗ್ಲಾ, ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಬೆದರಿತು. ಅಂತಿಮವಾಗಿ 16 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಸಿಡಿಸಲಷ್ಟೇ ಶಕ್ತವಾಯಿತು.

Copyright © All rights reserved Newsnap | Newsever by AF themes.
error: Content is protected !!