ನಂಜನಗೂಡಿನ ಕಪಿಲಾ ನದಿಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೂವರು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಒಬ್ಬ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಪಾಂಡವಪುರ ತಾಲೂಕಿನ ಬ್ಯಾಂಕ್ ಉದ್ಯೋಗಿ ರಶ್ಮಿ (35), ರಶ್ಮಿಯ ತಾಯಿ ಅಕ್ಕಮ್ಮ, ರಶ್ಮಿಯ ಮಗಳು ಮಿಂಚು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ ಆತ್ಮಹತ್ಯೆ ಗೆ ಮುಂದಾಗಿದ್ದಾರೆ.
ಬ್ಯಾಂಕ್ ಉದ್ಯೋಗಿಯಾದ ರಶ್ಮಿ 50 ಲಕ್ಷ ರೂಪಾಯಿಗಳ ಸಾಲ ಮಾಡಿದ್ದರು. ಇದರಿಂದ ನಿತ್ಯವೂ ಅವರ ಮನೆಯಲ್ಲಿ ಜಗಳಗಳು ನಡೆಯುತ್ತಿತ್ತು. ಇದರಿಂದ ಮನನೊನಂದ ರಶ್ಮಿ, ಅವರ ತಾಯಿ ಅಕ್ಕಮ್ಮ, ಮಗಳು ಮಿಂಚು ನದಿಗೆ ಧುಮುಕಿದ್ದಾರೆ.
ಇವರು ನದಿಗೆ ಹಾರಿದ ತಕ್ಷಣ ಅಲ್ಲೇ ಇದ್ದ ದನಗಾಹಿಗಳು ಇವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ರಶ್ಮಿಯವರನ್ನು ಹೊರತುಪಡಿಸಿ ಅಕ್ಕಮ್ಮ ಹಾಗೂ ಮಿಂಚು ಅವರನ್ನು ದನಗಾಹಿಗಳು ಕಾಪಾಡಿದ್ದಾರೆ. ಆದರೆ ರಶ್ಮಿ ಮೃತರಾಗಿದ್ದಾರೆ. ಪ್ರಕರಣವನ್ನು ನಂಜನಗೂಡಿನ ಗ್ರಾಮಾಂತರ ಠಾಣೆಯ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ.
More Stories
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ