ನವದೆಹಲಿ: ರಾಮೇಶ್ವರಂ ಕೆಫೆ ಸ್ಫೋಟ ಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದ್ದಾನೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ.
ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ .
ಭಾರತ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಗುಪ್ತಚರ ಸಂಸ್ಥೆ (National Intelligence Agency) ಮೂಲಕ ಸ್ಲೀಪರ್ ಸೆಲ್‌ಗಳ ಆಸ್ತಿಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೇ ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಹೇಳಿದ್ದಾನೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಟೆಲಿಗ್ರಾಮ್‌ನಲ್ಲಿ (Telegram ) ಮೂರು ವಾರಗಳ ಹಿಂದೆ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ .
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು