ಪವರ್​ಸ್ಟಾರ್​ ಪುನೀತ್ ​ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಲು ಚಿಂತನೆ

Team Newsnap
1 Min Read

ಹೃದಯಾಘಾತದಿಂದ ನಿಧರಾದ ಪವರ್​ಸ್ಟಾರ್​ ಪುನೀತ್​ ರಾಜಕುಮಾರ್​ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಚಿಂತನೆ ನಡೆದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್​ ಕುಮಾರ್​ ಪುನೀತ್​ ರಾಜ್​ಕುಮಾರ್​ಗೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶಿಫಾರಸು ಮಾಡಿದ್ದಾರೆ

ಆದರೆ ಈ ಶಿಫಾರಸು ನ್ಯಾ.ನಾಗ್​ಮೋಹನ್​ದಾಸ್​ ಸಮಿತಿ ನೀಡಿರುವ ವರದಿಗೆ ವಿರೋಧವಾಗಿದೆ ಎನ್ನಲಾಗಿದೆ.
ನ್ಯಾಯಮೂರ್ತಿ ನಾಗ್​ಮೋಹನ್​ ದಾಸ್​ ಸಮಿತಿ ನೀಡಿರುವ ವರದಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬಾರದೆಂದು ಹೇಳಲಾಗಿದೆ.

ಆದರೆ ಇದೀಗ ಪುನೀತ್​ ರಾಜ್​ಕುಮಾರ್​ ಅವ್ರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡುವ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಈ ಕುರಿತು ಸಿಎಂ ಬೊಮ್ಮಾಯಿ ಬಳಿ ಮಾತನಾಡಿರುವ ಸಚಿವರು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳೋದಾಗಿ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದಾಗಿ ನಿರ್ಧರಿಸಿದರೆ ಮರಣೋತ್ತರ ರಾಜ್ಯೋತ್ಸವ
ಪ್ರಶಸ್ತಿ ಪಡೆದ ಮೊದಲ ನಟನಾಗಲಿದ್ದಾರೆ ಪುನೀತ್​ ರಾಜ್‍ಕುಮಾರ್.

Share This Article
Leave a comment