December 25, 2024

Newsnap Kannada

The World at your finger tips!

rohini

Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಮೈಸೂರಿಗೆ ಬರುವವರು ನೆಗಟೀವ್ ರಿಪೋರ್ಟ್ ತನ್ನಿ: ಡಿಸಿ ರೋಹಿಣಿ ಆದೇಶಕ್ಕೆ ಸರ್ಕಾರದ ಬ್ರೇಕ್

Spread the love

ಕೊರೋನಾ ನಿಯಂತ್ರಣಕ್ಕೆ ಮೈಸೂರಿಗೆ ಮಾತ್ರ ಪ್ರತ್ಯೇಕ ಆದೇಶ ಮಾಡಿದ್ದ  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಪ್ರಸಾದ್ ಬ್ರೇಕ್ ಹಾಕಿ ಸರ್ಕಾರದ ಆದೇಶವನ್ನು ಪಾಲಿಸಿದರೆ ಸಾಕು ಎಂದಿದ್ದಾರೆ.

ಗುರುವಾರ ಅಷ್ಟೇ ಡಿಸಿ ಸಿಂಧೂರಿ
ಮೈಸೂರಿನ ದೇವಾಲಯ, ರೆಸಾರ್ಟ್, ಯಾವುದೇ ಪ್ರವಾಸಿ ಸ್ಥಳಗಳಿಗೆ ತೆರಳುವವರ ಬಳಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇರಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದರು.

ಈ ಆದೇಶ ಸ್ಥಳೀಯವಾಗಿ ಗೊಂದಲ, ಜನಸಾಮಾನ್ಯರ ಟೀಕೆಗೆ ಗುರಿಯಾಗಿತ್ತು. ಕೂಡಲೆ ಎಚ್ಚೆತ್ತ ಸರ್ಕಾರದಿಂದ ಪ್ರತಿ ಸ್ಪಷ್ಟನೆ ನೀಡಿ ಸುತ್ತೋಲೆ ಹೊರಡಿಸಿದೆ.

ಕೋವಿಡ್​ಗೆ ಸಂಬಧಿಸಿದ ಯಾವುದೇ ನಿಬಂಧನೆಗಳನ್ನು ಹೇರುವ ಅಧಿಕಾರ ಡಿಸಿಗೆ ಇಲ್ಲ. ಮುಖ್ಯಮಂತ್ರಿಗಳಿಗೆ ಮಾತ್ರ ಇಂತಹ ಅಧಿಕಾರ ಇದೆ. ಹೀಗಿದ್ದರೂ ಕೆಲವು ಜಿಲ್ಲಾಧಿಕಾರಿಗಳು ತಮ್ಮದೇ ಆದ ನಿರ್ಬಂಧಗಳನ್ನು ಹೇರುತ್ತಿದ್ದಾರೆ.

ಆರೋಗ್ಯ ಇಲಾಖೆ ಹೊರತುಪಡಿಸಿ ಕಂಟೈನ್ಮೆಂಟ್, ಮಾಸ್ಕ್ ದಂಡ, ಸಾಮಾಜಿಕ ಅಂತರ ದಂಡದ ವಿಚಾರವಾಗಿ ಯಾವುದೇ ನಿರ್ಬಂಧಗಳನ್ನು ಹೇರುವಂತಿಲ್ಲ ಹಾಗೂ ಪತ್ರಿಕಾ ಹೇಳಿಕೆ ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ‌ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆಯೂ ಸೂಚನೆ ನೀಡಿದ್ದಾರೆ. ಯಾವುದೇ ಆದೇಶಗಳನ್ನು ಸಿಎಂ ಅನುಮೋದನೆ ಪಡೆಯದೆ ಹೊರಡಿಸತಕ್ಕದ್ದು ಅಂತಲೂ ತಿಳಿ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!