ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಮಹಿಷ ದಸರಾ ಕೂಗು ಕೇಳಿ ಬಂದಿದ್ದು ,ಈ ಬಾರಿಯೂ ಮಹಿಷ ದಸರಾ ವಿವಾದ ಸೃಷ್ಟಿ ಮಾಡಿದೆ.
ಸೆಪ್ಟೆಂಬರ್ 29 ರಂದು ಮಹಿಷ ದಸರಾ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣ ಸಮಿತಿ ತಿಳಿಸಿದೆ.
ಚಾಮುಂಡಿ ಬೆಟ್ಟದಲ್ಲಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡುತ್ತೇವೆ ಹಾಗು ಈ ಯಿಂದ ಮಹಿಷಾ ದಸರಾ ಬದಲು `ಮಹಿಷ ಮಂಡಲೋತ್ಸವ’ ಎಂದು ಮರುನಾಮಕರಣ ಮಾಡಲಾಗಿದೆ.
ಮೊದಲಿಂದಲೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ , ಈ ಬಾರಿಯೂ ಧ್ವನಿ ಜೋರು ಮಾಡಿದ್ದಾರೆ.ದರ್ಶನ್ , ಪವಿತ್ರ ಜಾಮೀನು ಮುಂದೂಡಿಕೆ:ಮೂವರಿಗೆ ಜಾಮೀನು ಮಂಜೂರು
ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಮಾಡಲು ಬಿಡಲ್ಲ. ಒಂದು ವೇಳೆ ಅವರು ಅಲ್ಲೇ ಆಚರಿಸಲು ಹೊರಟರೆ ನಾವು ಕೂಡ ಚಾಮುಂಡಿ ಚಲೋ ನಡೆಸುತ್ತೇವೆ ಎಂದು ಕಿಡಿಕಾರಿದ್ದಾರೆ.
More Stories
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ