February 19, 2026

Newsnap Kannada

The World at your finger tips!

dasara,mysuru,elephant

Minister's drive to Dasara Gaja Payana - Elephants to Mysore on Aug10

ಈ ಬಾರಿಯೂ ಸರಳ ದಸರಾ: ಸೋಮಶೇಖರ್

Spread the love

ಕೊರೊನಾ ಮೂರನೇ ಅಲೆ ಭೀತಿ ಇದ್ದರೂ ವಿಶ್ವ ವಿಖ್ಯಾತಿಯ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.


ಸರಳ ದಸರಾ ಆಚರಣೆ ಸಂಬAಧ ರೂಪುರೇಷೆ ಸಿದ್ಧಪಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇದಾದ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಹಕಾರ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದರು.


ಎಚ್.ಡಿ.ಕೋಟೆ ತಾಲ್ಲೂಕು ಬಾವಲಿ ಚೆಕ್‌ಪೋಸ್ಟ್ ಪರಿಶೀಲನೆ ಸಮಯದಲ್ಲಿ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವರ್ಷ ದಸರಾಗೆಂದು ಮಂಜೂರಾಗಿದ್ದ ೧೦ ಕೋಟಿ ರು. ಪೈಕಿ ೭.೫ ಕೋಟಿರು. ಉಳಿದಿದೆ. ಮುಖ್ಯಮಂತ್ರಿಗಳ ಅನುಮೋದನೆ ಪಡೆದ ನಂತರ ಈ ಉಳಿಕೆ ಹಣವನ್ನು ಬಳಸಿಕೊಳ್ಳಲಾಗುವುದು. ಯಾವ ಕಾರಣಕ್ಕೂ ಈ ವರ್ಷ ದಸರಾ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

error: Content is protected !!