Trending

ಈಕೆ ಆರ್ ಸಿ ಬಿ ಆಟಗಾರರ ಮಸಾಜ್ ತಜ್ಞೆ ನವನೀತಾ !

ಐಪಿಎಲ್ ಆಟಗಾರರಿಗೆ ಹೆಣ್ಣು ಮಕ್ಕಳು ಮಸಾಜ್ ಮಾಡುತ್ತಾರೆ ಎಂದರೆ ಹಲವರಿಗೆ ನಂಬಲು ಕಷ್ಟವಾಗುತ್ತದೆ. ಕುತೂಹಲವಂತೂ ಇದ್ದೇ ಇದೆ.

ಈಕೆ ಹೆಸರು ನವನೀತಾ ಗೌತಮ್.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಕ್ರೀಡಾ ಮಸಾಜ್ ತಜ್ಞೆ.
ಐಪಿಎಲ್‌ನಲ್ಲಿ ನೇಮಕವಾಗಿರುವ ಪ್ರಥಮ ಮಹಿಳಾ ಸಿಬ್ಬಂದಿ.

ನವನೀತಾ ಭಾರತೀಯ ಮೂಲದವರು. ಅವರು ಕ್ರೀಡಾ ಮಸಾಜ್ ಥೆರಪಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ತಂಡದ ಮುಖ್ಯ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಮತ್ತು ಸ್ಟ್ರೆಂಥ್ –ಕಂಡಿಷನಿಂಗ್ ಕೋಚ್ ಶಂಕರ್ ಬಸು ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಆಟಗಾರರ ದೈಹಿಕ ಕ್ಷಮತೆಯನ್ನು ಆರೋಗ್ಯಪೂರ್ಣವಾಗಿಡಲು ಮಸಾಜ್‌ ಉತ್ತಮ ದಾರಿಯಾಗಿದೆ. ಈ ವಿಭಾಗವನ್ನು ನವನೀತಾ ಕರಾರುವಕ್ಕಾಗಿ ನಿರ್ವಹಿಸುತ್ತಿದ್ದಾರೆ.

ಒಬ್ಬ ಮಸಾಜ್ ತಜ್ಞೆಗೆ ಆಟಗಾರರ ಮಾಂಸಖಂಡಗಳ ರಚನೆ ಮತ್ತು ಸಾಮರ್ಥ್ಯವನ್ನು ಅರಿಯುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ಒಬ್ಬ ಯಶಸ್ವಿ ಮಸಾಜ್ ತಜ್ಞೆಯಾಗಬಹುದು ಎನ್ನುತ್ತಾರೆ ನವನೀತಾ.

ಮೊದಲಿನಿಂದಲೂ ಅಂಗಮರ್ಧನ ಶಾಸ್ತ್ರ ನನಗೆ ಇಷ್ಟವಾದ ವಿಷಯ, ಅಪ್ಪನೇ ನನ್ನ ಮೊದಲ ಗುರು, ಪ್ರಾಮಾಣಿಕತೆ ಮತ್ತು ಸತ್ಯದ ಪರ ಇರು ಎಂಬ ಅಪ್ಪನ ಮಾತನ್ನು ನಾನು ಪೂರ್ಣವಾಗಿ ಪಾಲಿಸುತ್ತೇನೆ ಎನ್ನುತ್ತಾರೆ ನವನೀತ.

ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಲಿಂಗ ಸಮಾನತೆಯ ವಿಷಯ ಬರುತ್ತದೆ. ವೃತ್ತಿ ಧರ್ಮ, ವೃತ್ತಿ ಗೌರವ, ವೃತ್ತಿ ನಿಯಮ ಇದ್ದ ಕಡೆ ಲಿಂಗ ಸಮಾನತೆಯ ಮಾತೇ ಬರುವುದಿಲ್ಲ.

ಈ ಹಿಂದೆ ಯುವರಾಜ್ ಸಿಂಗ್ ಮತ್ತು ಕೋಮಲ್ ಅಗರ್ವಾಲ್ ಜೊತೆಗೆ ಕೆಲಸ ಮಾಡಿದ ಅನುಭವ ಆರ್ ಸಿಬಿ ತಂಡದ ಒಬ್ಬ ಯಶಸ್ವಿ ಮಸಾಜ್ ತಜ್ಞೆಯಾಗಿ ಹೊರ ಹೊಮ್ಮಲು ಸಹಕಾರಿಯಾಗಿದೆ. ಈಗ ವಿಶ್ವ ವಿಖ್ಯಾತ ಕ್ರಿಕೆಟರ್ ಗಳಾದ ವಿರಾಟ್ ಕೋಹ್ಲಿ ಮತ್ತು ಎಬಿ ಡೆವಿಲಿಯರ್ಸ್ ಸೇರಿದಂತೆ 20 ಮಂದಿ ಸಹೋದರರ ಜೊತೆ ನಾನಿದ್ದೇನೆ. ಈ ಸಹೋದರರನ್ನು ಮತ್ತು ಭಾರತವನ್ನು ನಾನು ಎಂದಿಗೂ ಮರೆಯಲಾರೆ ಎಂದು ನವನೀತಾ ಭಾವುಕರಾಗಿ ಹೇಳಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024