ಐಪಿಎಲ್ ಆಟಗಾರರಿಗೆ ಹೆಣ್ಣು ಮಕ್ಕಳು ಮಸಾಜ್ ಮಾಡುತ್ತಾರೆ ಎಂದರೆ ಹಲವರಿಗೆ ನಂಬಲು ಕಷ್ಟವಾಗುತ್ತದೆ. ಕುತೂಹಲವಂತೂ ಇದ್ದೇ ಇದೆ.
ಈಕೆ ಹೆಸರು ನವನೀತಾ ಗೌತಮ್.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರೀಡಾ ಮಸಾಜ್ ತಜ್ಞೆ.
ಐಪಿಎಲ್‌ನಲ್ಲಿ ನೇಮಕವಾಗಿರುವ ಪ್ರಥಮ ಮಹಿಳಾ ಸಿಬ್ಬಂದಿ.
ನವನೀತಾ ಭಾರತೀಯ ಮೂಲದವರು. ಅವರು ಕ್ರೀಡಾ ಮಸಾಜ್ ಥೆರಪಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ತಂಡದ ಮುಖ್ಯ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಮತ್ತು ಸ್ಟ್ರೆಂಥ್ –ಕಂಡಿಷನಿಂಗ್ ಕೋಚ್ ಶಂಕರ್ ಬಸು ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಟಗಾರರ ದೈಹಿಕ ಕ್ಷಮತೆಯನ್ನು ಆರೋಗ್ಯಪೂರ್ಣವಾಗಿಡಲು ಮಸಾಜ್ ಉತ್ತಮ ದಾರಿಯಾಗಿದೆ. ಈ ವಿಭಾಗವನ್ನು ನವನೀತಾ ಕರಾರುವಕ್ಕಾಗಿ ನಿರ್ವಹಿಸುತ್ತಿದ್ದಾರೆ.
ಒಬ್ಬ ಮಸಾಜ್ ತಜ್ಞೆಗೆ ಆಟಗಾರರ ಮಾಂಸಖಂಡಗಳ ರಚನೆ ಮತ್ತು ಸಾಮರ್ಥ್ಯವನ್ನು ಅರಿಯುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ಒಬ್ಬ ಯಶಸ್ವಿ ಮಸಾಜ್ ತಜ್ಞೆಯಾಗಬಹುದು ಎನ್ನುತ್ತಾರೆ ನವನೀತಾ.
ಮೊದಲಿನಿಂದಲೂ ಅಂಗಮರ್ಧನ ಶಾಸ್ತ್ರ ನನಗೆ ಇಷ್ಟವಾದ ವಿಷಯ, ಅಪ್ಪನೇ ನನ್ನ ಮೊದಲ ಗುರು, ಪ್ರಾಮಾಣಿಕತೆ ಮತ್ತು ಸತ್ಯದ ಪರ ಇರು ಎಂಬ ಅಪ್ಪನ ಮಾತನ್ನು ನಾನು ಪೂರ್ಣವಾಗಿ ಪಾಲಿಸುತ್ತೇನೆ ಎನ್ನುತ್ತಾರೆ ನವನೀತ.
ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಲಿಂಗ ಸಮಾನತೆಯ ವಿಷಯ ಬರುತ್ತದೆ. ವೃತ್ತಿ ಧರ್ಮ, ವೃತ್ತಿ ಗೌರವ, ವೃತ್ತಿ ನಿಯಮ ಇದ್ದ ಕಡೆ ಲಿಂಗ ಸಮಾನತೆಯ ಮಾತೇ ಬರುವುದಿಲ್ಲ.
ಈ ಹಿಂದೆ ಯುವರಾಜ್ ಸಿಂಗ್ ಮತ್ತು ಕೋಮಲ್ ಅಗರ್ವಾಲ್ ಜೊತೆಗೆ ಕೆಲಸ ಮಾಡಿದ ಅನುಭವ ಆರ್ ಸಿಬಿ ತಂಡದ ಒಬ್ಬ ಯಶಸ್ವಿ ಮಸಾಜ್ ತಜ್ಞೆಯಾಗಿ ಹೊರ ಹೊಮ್ಮಲು ಸಹಕಾರಿಯಾಗಿದೆ. ಈಗ ವಿಶ್ವ ವಿಖ್ಯಾತ ಕ್ರಿಕೆಟರ್ ಗಳಾದ ವಿರಾಟ್ ಕೋಹ್ಲಿ ಮತ್ತು ಎಬಿ ಡೆವಿಲಿಯರ್ಸ್ ಸೇರಿದಂತೆ 20 ಮಂದಿ ಸಹೋದರರ ಜೊತೆ ನಾನಿದ್ದೇನೆ. ಈ ಸಹೋದರರನ್ನು ಮತ್ತು ಭಾರತವನ್ನು ನಾನು ಎಂದಿಗೂ ಮರೆಯಲಾರೆ ಎಂದು ನವನೀತಾ ಭಾವುಕರಾಗಿ ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು