ಇದು ಸಮರ್ಥನೆಯಲ್ಲ..! ನೇರ ನುಡಿ..!

Team Newsnap
2 Min Read
  • ಶಿಕ್ಷಣ ಮತ್ತು ವ್ಯವಸ್ಥೆ

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ”.. ಮೊದಲನೆಯಯದಾಗಿ ನನಗೆ ವಿದ್ಯೆ ಕಲಿಸಿ ಸಮಾಜದಲ್ಲಿ ಒಂದು ಉತ್ತಮವಾಗಿ ಜೀವನ ನಡೆಸಲು ನನ್ನನ್ನು ತಿದ್ದಿದ ಎಲ್ಲಾ ನನ್ನ ಗುರುವೃದಂದವರಿಗೂ ನನ್ನ ಶರಣು.

ಸ್ನೇಹಿತರೆ, ನಾವು ಸಂಪಾದಿಸುವ ಪ್ರತಿಯೊಂದು ಹೊರವಸ್ತುಗಳು,ಆಸ್ತಿ ಅಂತಸ್ತು ಯಾವುದೂ ಶಾಶ್ವತವಲ್ಲ. ಇದನೆಲ್ಲಾ ಸಂಪಾದಿಸಲೂಬಹುದು ಹಾಗೆಯೇ ಕಳೆದುಕೊಳ್ಳಲೂಬಹುದು. ಆದರೆ ಸಂಪಾದಿಸಿದ್ದು ಎಂದಿಗೂ ಕಳೆದುಕೊಳ್ಳಲಾಗದ, ನಮ್ಮನ್ನು ಬಿಟ್ಟುಹೋಗದ ಒಂದು ಆಸ್ತಿಯೆಂದರೆ ಅದು “ವಿದ್ಯೆ” ಮಾತ್ರ.. ಮಕ್ಕಳಿಗೆ ಆಸ್ತಿ ಮಾಡಿಡುವುದಕ್ಕಿಂತ ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾರ್ಪಡಿಸುವ ಶಕ್ತಿ ಶಿಕ್ಷಣಕ್ಕಿದೆ. ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಸತ್ಯ. ಆದರೆ ಮಾತನ್ನು ಕಲಿತ ನಂತರ ನಮ್ಮನ್ನು ತಿದ್ದಿ ತೀಡಿ ಅಕ್ಷರಸ್ಥರನ್ನಾಗಿ ಮಾಡಿ, ಸಮಾಜಕ್ಕೆ ಒಂದು ಉತ್ತಮ ಕೊಡುಗೆ ಮತ್ತು ದೇಶಕ್ಕೆ ಒಬ್ಬ ಒಳ್ಳೆಯ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಮತ್ತು ತಾಳ್ಮೆ ನಮ್ಮ ಗುರು ವೃಂದ ಅಥವಾ ಶಿಕ್ಷಕರದಾಗಿರುತ್ತದೆ.


ಗುರುಕುಲ ಶಿಕ್ಷಣದಿಂದಿಡಿದು ಇಂದಿನ ಆಧುನಿಕ ಶಿಕ್ಷಣದವರೆಗೆ ಅನೇಕ ಮಾರ್ಪಾಡುಗಳಾಗಿದ್ದಾವೆ. ಆದರೆ ಶಿಕ್ಷಕನ ಕೆಲಸದಲ್ಲಲ್ಲ.. ಹೌದು, ಇಂದಿನ ಶಿಕ್ಷಣ ವ್ಯವಸ್ತೆ ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ, ವ್ಯವಹಾರಿಕವಾಗಿ ಬದಲಾಗಿದೆ.. ಕಡಿವಾಣವಿಲ್ಲದ ಸರ್ಕಾರದ ನೀತಿ ನಿಯಮಗಳಿಂದ ಯಾರು ಬೇಕಾದರೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬಹುದಾಗಿದೆ.. ಇದರಿಂದ ಶಿಕ್ಷಣವೆನ್ನುವುದು ವ್ಯಾಪಾರವೆಂಬಂತೆ ಬದಲಾಗಿದೆ.. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎನ್ನುವ ಹಂಬಲವಿರುವ ಪೋಷಕರ ಆಸೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ‘ಡೊನೇಷನ್’ಎನ್ನುವ ಮಾರಕ ರೋಗ ಇಂದು ನಮ್ಮ ದೇಶದೆಲ್ಲೆಡೆ ವ್ಯಾಪಿಸಿದೆ.

ಮಕ್ಕಳ ಶಿಕ್ಷಣವು ಇಂದು ಮಾರಾಟಕ್ಕಿವೆ ಅಂದರೆ ಕಲಿಯುವ ಶಿಕ್ಷಣದಲ್ಲಿ ಕೂಡ ಹಣಕ್ಕೆ ತಕ್ಕಂತೆ ಶಿಕ್ಷಣ ಮಾದರಿ ಗುಣಮಟ್ಟಗಳು ಬದಲಾಗಿವೆ. ಶ್ರೀಮಂತನು ಅಧಿಕ ಡೊನೆಷನ್ ಕಟ್ಟುವ ಮುಖಾಂತರ ತನ್ನ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಂಸ್ಥೆಯ ಹುಡುಕಾಟದಲ್ಲಿದ್ದರೆ, ಮಧ್ಯಮವರ್ಗದವರು, ಬಡವರು ಈ ಡೊನೇಷನ್ ಎಂಬ ರೋಗಕ್ಕೆ ಬಲಿಯಾಗುತ್ತಿದ್ದಾರೆ.. ವಿಧ್ಯಾರ್ಥಿಯ ಗುಣಮಟ್ಟ ಮತ್ತು ಅವನ ಸಾಮರ್ಥ್ಯಕ್ಕೆ ಬೆಲೆಯಿಲ್ಲದಂತಾಗುತ್ತಿದೆ.. ಇಲ್ಲೂ ಕೂಡ ಭೇದಭಾವ ತಲೆದೋರುತ್ತಿದೆ…ಇವೆಲ್ಲಾ ಅನಿವಾರ್ಯತೆ. ಇಂದು ಖಾಸಗೀ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ಕಾಣಸಿಗುತ್ತದೆ.. ಆದರೆ ಸರ್ಕಾರಿ ಶಾಲೆಗಳು ಮಾತ್ರ ಕೆಲವಾರು.. ಆದರೂ ಪರವಾಗಿಲ್ಲ ಸರ್ಕಾರಿ ಶಾಲೆಗಳ ವ್ಯವಸ್ತೆ ಗಳಾದರೂ ಸರಿಯಾಗಿದ್ದು,ಸರಿಯಾದ ಶಿಕ್ಷಕ ಸಿಬ್ಬಂದಿಗಳಿದ್ದಾರ ಎಂದರೆ ಅದೂ ಇಲ್ಲ.. ದೇಶದಲ್ಲಿನ ನೂರಕ್ಕೆ ಶೇ 70ರಷ್ಟು ಸರ್ಕಾರಿ ಶಾಲೆಗಳಲ್ಲಿ ಸರಿಯಾದ ವ್ಯವಸ್ತೆಯಿರುವುದಿಲ್ಲ, ಸರಿಯಾದ ಶಿಕ್ಷಕ ಸಿಬ್ಬಂದಿಗಳಿರುವುದಿಲ್ಲ. ಇದನೆಲ್ಲಾ ಸರಿದೂಗಿಸಿ ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆಯನ್ನು ಕೊಡಬೇಕು ಮತ್ತು ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ಯಾರುಬೇಕಾದರೂ ಎಲ್ಲಿ ಬೇಕಾದರೂ ತೆರೆಯುವ ಅವಕಾಶಕ್ಕೆ ಕಡಿವಾಣ ಹಾಕಬೇಕು. ಡೊನೇಷನ್ ಮಾರಕಕ್ಕೆ ಸರಿಯಾದ ಕಾನೂನು ತರಬೇಕು.ಗುರು ಎಂಬೊ ಅರಿವಿನ ವಿಸ್ತಾರ….

ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಕೊಡದಿದ್ದರೂ ಪರವಾಗಿಲ್ಲ, ಅಲ್ಪ ಮಟ್ಟದಲ್ಲಿ ಫೀಸ್ ತೆಗೆದುಕೊಳ್ಳಲ್ಲಿ ಆದರೆ, ಅದು ಖಾಸಗೀ ಶಾಲೆಗಳೊಂದಿಗೆ ಸ್ಪರ್ಧಿಸುವಂತಿರಬೇಕು. ಗುಣಮಟ್ಟದ ಕಟ್ಟಡ, ಶಿಕ್ಷಣ, ಶಿಕ್ಷಕರಿಂದ ಕೂಡಿರಬೇಕು. ಹಾಗಾದಲ್ಲಿ ಶಿಕ್ಷಣದ ಜೊತೆಗೆ ದೇಶವೂ ಅಭಿವೃದ್ದಿ ಆಗುತ್ತದೆ, ದೇಶದ ಜನರು ಅಭಿವೃದ್ದಿಯಾಗುತ್ತಾರೆ… ಎಲ್ಲಕ್ಕಿಂತಲೂ ಮುಖ್ಯವಾಗಿ ಬಡವ,ಮಧ್ಯಮ,ಬಲ್ಲಿದ ಎಂಬ ವರ್ಗಗಳ ಸಮಾನತೆಯೂ ಸಾಧ್ಯವಾಗುತ್ತದೆ..

image 3

✍🏻 ಅಶ್ವಾಕ್ ಶಾಹ್ ಕನ್ನಡಿಗ

Share This Article
Leave a comment