December 31, 2024

Newsnap Kannada

The World at your finger tips!

track acci

ಪಶ್ಚಿಮ ಬಂಗಾಳದಲ್ಲಿ ಕಲ್ಲು ತುಂಬಿದ ಟ್ರಕ್ ಕಾರು, ವ್ಯಾನ್ ಮೇಲೆ ಬಿದ್ದು 13 ಮಂದಿ ದಾರುಣ ಸಾವು

Spread the love

ಕಲ್ಲು ತುಂಬಿದ ಟ್ರಕ್ ಕಾರು ಮತ್ತು ವ್ಯಾನ್ ಮೇಲೆ ಉರುಳಿ ಬಿದ್ದ ಪರಿಣಾಮ 13 ಮಂದಿ ದುರಂತ ಸಾವು ಕಂಡಿದ್ದಾರೆ.

ಪಶ್ಚಿಮ ಬಂಗಾಳದ ಜುಲ್ಪೈ ಗುರಿ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳೀಯ ಶಾಸಕ ಮಿಥಾಲಿ ರಾಯ್ ಹೇಳಿಕೆ ಯಂತೆ ಗಾಯಗೊಂಡ ವರ ಸ್ಥಿತಿ ಕೂಡ ಗಂಭೀರವಾಗಿದೆ. ಅವರನ್ನು ಜುಲ್ಪೈಗುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓವರ್ ಲೋಡ್ ಕಲ್ಲು ತುಂಬಿಕೊಂಡ ಹೋಗುತ್ತಿದ್ದ ಟ್ರಕ್ ಸಮತೋಲನ ಕಳೆದುಕೊಂಡು ಪಕ್ಕದಲ್ಲಿ ಹೋಗುತ್ತಿದ್ದ ಕಾರು ಮತ್ತು ವ್ಯಾನ್ ಮೇಲೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.

ಒಂದು ವಾರದಲ್ಲಿ ಮೂರು ಘಟನೆ :

ಕಳೆದ ಒಂದು ವಾರದೊಳಗೆ ದೇಶದಲ್ಲಿ ಮೂರು ದುರಂತದಲ್ಲಿ 39 ಜನ ದಾರುಣ ಸಾವು ಕಂಡಂತಾಗಿದೆ.

ಧಾರವಾಡ ಬಳಿ ಮರಳು ತುಂಬಿದ ಲಾರಿ ಟೆಂಪೋ ಟ್ರಾವಲರ್ ಗೆ ಡಿಕ್ಕಿ ಯಾಗಿ ದಾವಣಗೆರೆಯ 13 ಮಂದಿ ಧಾರುಣ ಸಾವುಕಂಡಿದ್ದರು.

ನಿನ್ನೆ ಬೆಳಗಿನ ಜಾವ ಗುಜರಾತ್ ನ ಸೂರತ್ ಸಮೀಪ ಟ್ರಕ್ ವೊಂದು ಫುಟ್ ಪಾತ್ ಮೇಲೆ ಮಲಗಿದ್ದ 13 ಮಂದಿ ಕಾರ್ಮಿಕರ ಮೇಲೆ ಹರಿದ ಪರಿಣಾಮ ಎಲ್ಲರೂ ಸಾವನ್ನಪ್ಪಿದ್ದರು.

ಇಂದು ಮತ್ತೆ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ದುರಂತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. 2021ರ ಆರಂಭ ಒಂದು ರೀತಿಯಲ್ಲಿ ದುರಂತ ವಷ೯ ಆಗಬಹುದು ಎಂದು ಹೇಳಿದಂತಿದೆ .

Copyright © All rights reserved Newsnap | Newsever by AF themes.
error: Content is protected !!