November 15, 2024

Newsnap Kannada

The World at your finger tips!

cyber , crime , arrested

ಸೈಬರ್ ವಂಚನೆಗೆ ಬ್ರೇಕ್ ಗಾಗಿ ಶೀಘ್ರವೇ ‘ಸೈಬರ್ ಪಾಲಿಸಿ’ ಜಾರಿಗೆ ಚಿಂತನೆ

Spread the love

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ನಂತರ ಅಪರಾಧಗಳಿಗೆ ಬ್ರೇಕ್​ ಹಾಕಲು ಕ್ರೈಂ ವಿಭಾಗದಲ್ಲಿ ಹೊಸ ಕಾನೂನು ತರಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಸಾರ್ವಜನಿಕರ ದಾಖಲೆಗಳು, ರಾಜ್ಯ ಸರ್ಕಾರದ ರಹಸ್ಯ ವಿಷಯಗಳನ್ನು ಬಿಗಿಭದ್ರತೆಯಲ್ಲಿ ಕಾಪಾಡಲು ಹೊಸ ಕಾನೂನನ್ನ ತರಲು ಚಿಂತಿಸಲಾಗಿದೆ.

ನಿಮ್ಮದೇ ಮೊಬೈಲ್​ಗೆ ಕೈ ಹಾಕಿ ದಾಖಲೆ ಕಳ್ಳತನ ಮಾಡುವ ಹಾಗೂ ನಿಮ್ಮದೇ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವ ಖದೀಮರು ಸಾಕಷ್ಟು ತುಂಬಿಕೊಂಡಿದ್ದಾರೆ.

ನೀವು ಕ್ಷಣ ಯಾಮಾರಿದ್ರೂ ಕಣ್ ಮುಚ್ಚಿ ತೆರೆಯೋದ್ರೊಳಗೆ ನಿಮ್ಮ ಖಾತೆಯಲ್ಲಿನ ಎಲ್ಲಾ ಕಾಂಚಾಣ ಫುಲ್​ ಕ್ಲೀನ್​. ಸದ್ಯ ಇಂತ ಸೈಬರ್​ ಅಪರಾಧ ಪ್ರಕರಣಗಳಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ಸೈಬರ್ ಅಪರಾಧದಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಸೈಬರ್ ಹ್ಯಾಕಿಂಗ್, ಡೇಟಾ ಕಳ್ಳತನ ಹಾಗೂ ಬ್ಯಾಂಕಿಂಗ್​ಗಳಲ್ಲಿ ಅಕ್ರಮ ಸೇರಿದಂತೆ ಹಲವು ರೀತಿಯಲ್ಲಿ ಸೈಬರ್ ಲೋಕದಲ್ಲಿ ಪ್ರಕರಣಗಳು ನಿತ್ಯ ದಾಖಲಾಗುತ್ತವೆ. ಇದಕ್ಕೆ ಬ್ರೇಕ್​ ಹಾಕಬೇಕಂತಲೇ ಬೇರೆ ರಾಜ್ಯಗಳಲ್ಲಿ ಚಾಲ್ತಿ ಇರುವ ಸೈಬರ್ ಪಾಲಿಸಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಪ್ಲ್ಯಾನ್ ನಡೆದಿದೆ.

ಜ್ಞಾನವಾಪಿ ಮಸೀದಿ ಪ್ರಕರಣದ ತೀರ್ಪು ಸೆಪ್ಟಂಬರ್ 12 ಕ್ಕೆ

ಹರಿಯಾಣ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವ ಸೈಬರ್ ಪಾಲಿಸಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಪ್ಲ್ಯಾನ್ ನಡೆದಿದೆ. ಈ ನೀತಿಯಿಂದ ಸೈಬರ್ ದಾಳಿಗಳ ಬಗ್ಗೆ ಬೆದರಿಕೆ ಬಂದಾಗ ಸರ್ಕಾರಿ ಸಂಸ್ಥೆಗಳ ಮೂಲಕ ಕಂಪ್ಯೂಟರ್ ಎಮರ್ಜೆನ್ಸಿ ವರ್ಕ್​ ಟೀಂಗೆ ಮಾಹಿತಿ ನೀಡಲಾಗುತ್ತೆ. ಮಾತ್ರವಲ್ಲದೆ ಈ ಬಗ್ಗೆ ಜಾಗೃತಿ ತರಲು ಇಂಜಿನಿಯರಿಂಗ್, ಡಿಪ್ಲೊಮಾದಲ್ಲಿ ವಿಷಯವಾಗಿ ಬೋಧನೆ ಮಾಡುವುದು, ಅಗತ್ಯವಿರುವವರಿಗೆ ತರಬೇತಿ ಹಾಗೂ ಅರಿವು ಮೂಡಿಸಲಾಗುವುದು.

Copyright © All rights reserved Newsnap | Newsever by AF themes.
error: Content is protected !!