December 23, 2024

Newsnap Kannada

The World at your finger tips!

dairy , food , product

There is no threat to Nandi from Amul in the state: Gujarat CM ರಾಜ್ಯದಲ್ಲಿ ನಂದಿನಿಗೆ ಅಮುಲ್ ನಿಂದ ಯಾವುದೇ ಬೆದರಿಕೆ ಇಲ್ಲ : ಗುಜರಾತ್ ಸಿಎಂ

ರಾಜ್ಯದಲ್ಲಿ ನಂದಿನಿಗೆ ಅಮುಲ್ ನಿಂದ ಯಾವುದೇ ಬೆದರಿಕೆ ಇಲ್ಲ : ಗುಜರಾತ್ ಸಿಎಂ

Spread the love

ಕರ್ನಾಟಕದಲ್ಲಿ ನಂದಿನಿ ಹಾಗೂ ಅಮುಲ್ ನಡುವೆ ನಡೆದಿರುವ ಕದನದ ಮಧ್ಯೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ದಕ್ಷಿಣ ರಾಜ್ಯದಲ್ಲಿ ಅಮುಲ್ ಬಹಿಷ್ಕರಿಸುವ ಅಗತ್ಯವಿಲ್ಲ ಎಂದಿದ್ದಾರೆ.

ನನ್ನ ದೃಷ್ಟಿಯಲ್ಲಿ ಅಮುಲ್ ಬಹಿಷ್ಕರಿಸುವ ಅಗತ್ಯವಿಲ್ಲ, ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡುತ್ತಿರಿ.

ಅಮುಲ್ ಏನನ್ನಾದರೂ ಕಸಿದುಕೊಳ್ಳುತ್ತಿದ್ದರೆ, ಅದು ಪ್ರತಿಭಟನೆಯ ವಿಷಯವಾಗಿದೆ ಎಂದು ಪಟೇಲ್ ಹೇಳಿದರು.

ದಕ್ಷಿಣ ರಾಜ್ಯದಲ್ಲಿ ಅಮುಲ್‌ಗೆ ಅವಕಾಶ ನೀಡುವ ಮೂಲಕ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ನಂದಿನಿಯನ್ನು ಕೊಲ್ಲಲು ಬಯಸಿದೆ ಎಂದು ಕರ್ನಾಟಕದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜನತಾ ದಳ(ಜಾತ್ಯತೀತ) ಆರೋಪಿಸಿವೆ.

ಕೆಎಂಎಫ್ ನಂದಿನಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಮುಲ್ ಗೆ ದಾರಿ ಮಾಡಿಕೊಡಲು ನಂದಿನಿ ಉತ್ಪನ್ನಗಳ ಕೊರತೆ ಸೃಷ್ಟಿಸಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಬಿಜೆಪಿ ಸರ್ಕಾರವು ಆರೋಪ ನಿರಾಕರಿಸಿದ್ದು, ನಂದಿನಿಗೆ ಅಮುಲ್‌ನಿಂದ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದೆ.ಇದನ್ನು ಓದಿ –ರಾಮದಾಸ್ – ಅರವಿಂದ್ ಲಿಂಬಾವಳಿಗೆ ಟಿಕೆಟ್ ಇಲ್ಲ – 10 ಅಭ್ಯರ್ಥಿಗಳ ಪಟ್ಟಿ ಬಿಜೆಪಿ ಪಟ್ಟಿ ರಿಲೀಸ್

Copyright © All rights reserved Newsnap | Newsever by AF themes.
error: Content is protected !!