December 27, 2024

Newsnap Kannada

The World at your finger tips!

vatal

ನಾಳೆ ‘ಕರ್ನಾಟಕ ಬಂದ್’ ಇಲ್ಲ : ವಾಟಾಳ್ ನಾಗರಾಜ್

Spread the love

ಹಲವರ ವಿರೋಧಗಳ ಬಳಿಕ ಕನ್ನಡಪರ ಸಂಘಟನೆಗಳು ನಾಳೆ ನಡೆಯಬೇಕಿದ್ದ ಕರ್ನಾಟಕ ಬಂದ್​ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್​ ನಡೆಸುತ್ತಿರುವ ಪುಂಡಾಟವನ್ನು ಖಂಡಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳು ಡಿಸೆಂಬರ್ 22 ರಂದು ಘೋಷಣೆ ಮಾಡಿದ್ದವು.

ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಇಂದು ಸಂಜೆ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಹಾಗೂ ಉಮೇಶ್ ಬಣಕಾರ್  ಸೇರಿ ಹಲವು ಮುಖಂಡರು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಭೇಟಿ ಬಳಿಕ ನಾಳೆ ಕರ್ನಾಟಕ ಬಂದ್ ಮಾಡುವ ನಿರ್ಧಾರವನ್ನು ಹಿಂಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಎಂಇಎಸ್ ನಿಷೇಧದ ಭರವಸೆ :

ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು.

ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡ್ತೀವಿ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ಹೇಳಿದರು.

ವ್ಯಾಪಾರ ವಹಿವಾಟು ಮಾಡಬಹುದು :

ಕನ್ನಡದ ರಕ್ಷಣೆಗೆ ಸರ್ಕಾರ ಯಾವತ್ತು ಬದ್ಧವಾಗಿದೆ. ಕನ್ನಡ ಸಂಘಟನೆ ನಾಳೆ ಕರೆ ಕೊಟ್ಟಿರುವ ಬಂದ್‍ನ್ನು ವಾಪಸ್ ತೆಗೆದುಕೊಂಡಿದೆ. ನಾಳೆ ಬಂದ್ ಇಲ್ಲ. ಎಲ್ಲರೂ ಕೂಡ ಎಂದಿನಂತೆ ವ್ಯಾಪಾರ ವ್ಯವಹಾರಗಳನ್ನು ನಡೆಸಬಹುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!