February 21, 2026

Newsnap Kannada

The World at your finger tips!

niramal s

ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ

Spread the love

ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಯ ಹಳೆಯ ತೆರಿಗೆ ಪದ್ದತಿಯನ್ನೇ ಮುಂದುವರಿಸುವುದಾಗಿ ಘೋಷಣೆಯನ್ನು ಮಾಡಿದ್ದು, ಭಾರೀ ಬದಲಾವಣೆಯಾಗುತ್ತೆದೆ ಎಂದವರ ನಿರೀಕ್ಷೆ ಹುಸಿಯಾಗಿದೆ.

ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ 2.50 ಲಕ್ಷ ರೂಪಾಯಿವರೆಗೆ ಆದಾಯವನ್ನು ಹೊಂದಿದವರಿಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವೈಯಕ್ತಿಯ ಆದಾಯ ತೆರಿಗೆಯಲ್ಲಿ ಯಾವುದೇ ವಿನಾಯಿತಿಯನ್ನು ಘೋಷಿಸಿಲ್ಲ.

2.5 ಲಕ್ಷ ರೂ. ನಿಂದ 5 ಲಕ್ಷ ರೂಪಾಯಿ ಆದಾಯ ಹೊಂದಿದವರು ಶೇ.5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಉಳಿದಂತೆ 2.5 ಲಕ್ಷದ ವರೆಗೆ ಯಾವುದೇ ತರಿಗೆಯನ್ನು ಪಾವತಿ ಮಾಡುವಂತಿಲ್ಲ.

ಇನ್ನು 5 ಲಕ್ಷದಿಂದ 7.50 ಲಕ್ಷ ಆದಾಯ ಹೊಂದಿದವರು ಶೇ. 10ರಷ್ಟು ತೆರಿಗೆ, 7.50 ರಿಂದ 10 ಲಕ್ಷ ಆದಾಯಕ್ಕೆ ಶೇ.15, 10 ರಿಂದ 12.50 ಲಕ್ಷ ಆದಾಯ ಹೊಂದಿದವರಿಗೆ ಶೇ.20, 12.50 ರಿಂದ 15 ಲಕ್ಷ ಆದಾಯ ಹೊಂದಿವರು ಶೇ.25 ರಷ್ಟು ಹಾಗೂ 15 ಲಕ್ಷಕ್ಕೂ ಅಧಿಕ ಆದಾಯ ಹೊಂದಿದವರು ಶೇ.30 ರಷ್ಟು ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ.

error: Content is protected !!