January 10, 2025

Newsnap Kannada

The World at your finger tips!

movi

ಥೇಟರ್ ಭರ್ತಿ ಶೇ 50 ರಷ್ಟು ಕಡಿತ ಸಧ್ಯಕ್ಕೆ ಇಲ್ಲ – ಚಿತ್ರರಂಗಕ್ಕೆ ಬಿಗ್ ರಿಲೀಪ್

Spread the love

ಸಿನಿಮಾ ಮಂದಿರ ಶೇ 50 ರಷ್ಟು ಭರ್ತಿಗೆ ಅವಕಾಶ ಸಧ್ಯಕ್ಕೆ ಇಲ್ಲ. ಏಪ್ರಿಲ್ ಕೊನೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟವಾದ ನಂತರವೇ ಕಠಿಣ ಕ್ರಮ ಎಂದು ಹೇಳಿರುವುದು ಚಿತ್ರ ರಂಗಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಬಿಬಿ‌ಎಂಪಿ ಪ್ರಸ್ತಾವನೆ :

ಎರಡನೇ ಹಂತದ ಕೊರೋನಾ ತಡೆಗೆ‌ ಮಾಲ್, ಥಿಯೇಟರ್​ಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಪ್ರವೇಶ ನೀಡುವ ಅವಕಾಶವನ್ನು ಮತ್ತೆ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

ಸಿಎಂ ಭೇಟಿಗೆ ನಿರ್ಧಾರ ?

ಈ ಪ್ರಸ್ತಾವನೆ ಗೆ ಸಿಡಿದೆದ್ದಿರುವ ಸ್ಯಾಂಡಲ್ ವುಡ್ ನಟರು, ನಾಳೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿನಿಮಾ ಮಂದಿರ ಗಳಿಗೆ ಶೇ 50 ರಷ್ಟು ಪ್ರೇಕ್ಷಕರಿಗೆ ಅವಕಾಶ‌ ನೀಡುವುದು ಬೇಡ. ಸಿನಿಮಾ ಮಂದಿರಕ್ಕೆ ಶೆ100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಮನವಿ ಮಾಡಲು ಸಜ್ಜಾಗಿದೆ.

ಈ ನಡುವೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‌, ಸಿನಿಮಾ ಹಾಲ್ ಗಳಲ್ಲಿ ಅತೀ ಹೆಚ್ಚು ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಶೇಕಡಾ 50ರಷ್ಟು ಸಿನಿಮಾ ಹಾಲ್ ನಿಗದಿಗೊಳಿಸಬೇಕು. ಅಪಾರ್ಟ್​ಮೆಂಟ್​ಗಳಲ್ಲಿ ಪಾರ್ಟಿ ಹಾಲ್, ಜಿಮ್​​​​​ಗಳನ್ನು ಬಂದ್ ಮಾಡಬೇಕು. ಮಾಲ್​​ಗಳಲ್ಲಿ ಸಾರ್ವಜನಿಕರು ಮಾಸ್ಕ್ ಇಲ್ಲದೇ ಓಡಾಡಿದರೆ ಮಾಲ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸಿಲಿಕಾನ್​ ಸಿಟಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸದ್ಯ ನಗರದಲ್ಲಿ ಸೋಂಕಿನ ಪ್ರಕರಣಗಳನ್ನು ಕಡಿಮೆ ಮಾಡುವುದು ಬಿಬಿಎಂಪಿಗೆ ತಲೆನೋವಾಗಿದೆ ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೆಲವು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.

ಬೆಂಗಳೂರಿನಲ್ಲಿ‌ ಇಂದು 1048 ಪಾಸಿಟಿವ್ ಕೇಸ್ ದಾಖಲಾಗಿದೆ. ಪೂರ್ವ ಪಶ್ಚಿಮ ದಕ್ಷಿಣ ಮಹಾದೇವಪುರ ಬೊಮ್ಮನಹಳ್ಳಿ ವಲಯಗಳಲ್ಲಿ ಸೋಂಕು‌ ಹೆಚ್ಚಿದೆ. ಆರ್ ಆರ್ ನಗರ, ದಾಸರಹಳ್ಳಿ, ಯಲಹಂಕದಲ್ಲಿ ಕಡಿಮೆ ಕೇಸ್ ದಾಖಲಾಗುತ್ತಿದೆ.

ಈ ರೀತಿಯಾಗಿ ಕೇಸ್ ಗಳು ಹೆಚ್ಚಾಗೋದಕ್ಕೆ ಮೊದಲ ಕಾರಣ ಟ್ರಾವೆಲ್ ಹಿಸ್ಟರಿ. ಇನ್ನ ಅಪಾರ್ಟ್ಮೆಂಟ್​ಗಳಲ್ಲಿ ಹೆಚ್ಚು ಸೋಂಕಿನ ಪ್ರಕರಣಗಳು ಕಂಡುಬರುತ್ತಿವೆ. ಮದುವೆಗೆ ಹೋಗಿ ಬರುವವರು ಹಾಗೂ ದೇವಸ್ಥಾನ ಜಾತ್ರೆಗೆ ಹೋಗಿ ಬರುವವರಲ್ಲಿ ಸೋಂಕು ಹೆಚ್ಚಾಗಿದೆ. ಅಪಾರ್ಟ್​​ಮೆಂಟ್​​ಗಳಲ್ಲಿ ಪಾರ್ಟಿ ಹಾಲ್​, ಜಿಮ್ ಕೊರೊನಾ ಹಾಟ್ ಸ್ಪಾಟ್ ಆಗಿದೆ ಎಂದು ತಿಳಿಸಿದರು.

ಇದೇ ವೇಳೆ ಸ್ಲಂಗಳಲ್ಲಿ ಪ್ರಕರಣಗಳು ಹೆಚ್ಚು ಬರುತ್ತಿಲ್ಲ. ನಿನ್ನೆ ಒಂದೇ ದಿನ 44 ಸಾವಿರ ಜನರಿಗೆ ನಾವು ಟೆಸ್ಟ್ ನಡೆಸಿದ್ದೇವೆ ಎಂದರು

Copyright © All rights reserved Newsnap | Newsever by AF themes.
error: Content is protected !!