January 5, 2025

Newsnap Kannada

The World at your finger tips!

dks sidd

ಸದನದಲ್ಲೇ ಪಂಚೆ ಕಳಚಿದ್ದಕ್ಕೆ, ತಮ್ಮ ದಪ್ಪದಾದ ಹೊಟ್ಟೆ‌ ಕಾರಣ‌ ಎಂದ ಸಿದ್ದು !

Spread the love

ಸದನದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯನವರಿಗೆ ಪಂಚೆ ಕಳಚಿದೆ ಅಂತ ಡಿಕೆಶಿ ಕಿವಿಯಲ್ಲಿ ಹೇಳಿದಾಗ , ಹೌದ ಹೊಟ್ಟೆ ದಪ್ಪಾ ಆಗಿದೆ. ಹಾಳಾದ್ದು ಈ ಪಂಚೆ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹಾಸ್ಯ ಮಾಡುತ್ತಲೇ ಪಂಚೆ ಸರಿ ಮಾಡಿಕೊಂಡ ಪ್ರಸಂಗ ಇಂದು ಜರುಗಿತು.

ಇಂದು ನಡೆಯುತ್ತಿದ್ದ ವಿಧಾನಸಭಾ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆ ಪ್ರಸಂಗ ಕಲಾಪದಲ್ಲಿ ಇರುವವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು

ಕಲಾಪದ ವೇಳೆ ಸಿದ್ದರಾಮಯ್ಯ ಅವರ ಪಂಚೆ ಬಿಚ್ಚಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್, ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಹೇಳಿದ್ದಾರೆ.

ಆಗ ಸಿದ್ದರಾಮಯ್ಯ ಅವರು ಯಾಕೋ ಇತ್ತೀಚೆಗೆ ಹೊಟ್ಟೆ ಸ್ವಲ್ಪ ದಪ್ಪ ಆಗಿದೆ. ಪಂಚೆ ಬಿಚ್ಚಿ ಹೋಗಿದೆ. ನಾನು ಪಂಚೆ ಕಟ್ಟಿಕೊಂಡು ಬಂದು ಭಾಷಣವನ್ನು ಮಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಆಗ ಕಲಾಪದಲ್ಲಿ ಇದ್ದವರು ನಗೆಗಡಲಲ್ಲಿ ತೇಲಿದ್ದಾರೆ.

ಆಗ ಮಧ್ಯ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮ ಅಧ್ಯಕ್ಷರು ಬಂದು ಪಕ್ಷದ ಮಾನ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದಾರೆ. ಆದರೆ ನೀವು ಊರಿಗೆಲ್ಲ ಹೇಳಿಬಿಟ್ಟ್ರಿ. ಅವರ ಶ್ರಮ ವ್ಯರ್ಥವಾಯಿತ್ತು ಎಂದಿದ್ದಾರೆ. 

ಸದನದಲ್ಲಿ ಇದ್ದವರು ಸಹಾಯಬೇಕಾ ಎಂದು ಕೇಳಿದ್ದಾರೆ. ಆಗ ರಮೇಶ್ ಕುಮಾರ್ ಅವರ ಉದ್ಯೋಗವೇ ನಮ್ಮ ಪಕ್ಷವನ್ನು ಕಳಚೋದು ಆಗಿದೆ. ನೋಡಿ ಹೇಗೆ ಕಾಯುತ್ತಾ ಕುಳಿತ್ತಿದ್ದಾರೆ ಈಶ್ವರಪ್ಪ ಅವರು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!