January 13, 2026

Newsnap Kannada

The World at your finger tips!

yuvraj singh

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ

Spread the love

ಮುಂಬಯಿ : ಪಂಚಕುಲದ ಎಂಡಿಸಿ ಸೆಕ್ಟರ್ 4ರಲ್ಲಿರು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ನಿವಾಸದಲ್ಲಿ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

75 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳರು ಯುವರಾಜ್ ಸಿಂಗ್ ಅವರ ಮನೆಯಲ್ಲಿ ಕದ್ದೊಯ್ದಿದ್ದು, ಮನೆಗೆಲಸದವರ ಮೇಲೆ ಆರೋಪ ಕೇಳಿ ಬರುತ್ತಿದೆ.

ಶಬ್ನಮ್ ಸಿಂಗ್ ( ಯುವರಾಜ್ ಸಿಂಗ್ ಅವರ ತಾಯಿ )ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು , ಮನೆಗೆಲಸದ ಸಿಬ್ಬಂದಿಗಳಾದ ಲಲಿತಾ ದೇವಿ ಮತ್ತು ಬಿಹಾರ ಮೂಲದ ಅಡುಗೆ ಸಿಬಂದಿ ಸಿಲ್ದಾರ್ ಪಾಲ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಸಿಂಗ್ ಸೆಪ್ಟೆಂಬರ್ 2023 ರಿಂದ ಗುರ್ಗಾಂವ್‌ನಲ್ಲಿರುವ ತಮ್ಮ ಎರಡನೇ ನಿವಾಸದಲ್ಲಿ ವಾಸಿಸುತ್ತಿದ್ದರು . ಬಳಿಕ ಅಕ್ಟೋಬರ್ 5, 2023 ರಂದು ಅವರು ಪಂಚಕುಲದ ಮನೆಗೆ ಹಿಂದಿರುಗಿದ್ದಾರೆ, ಈ ವೇಳೆ ಮನೆಯಲ್ಲಿದ್ದ ಸುಮಾರು 75,000 ರೂಪಾಯಿ ಮೌಲ್ಯದ ಆಭರಣಗಳು ಮತ್ತು ಇತರ ವಸ್ತುಗಳು ಕಪಾಟಿನಲ್ಲಿ ಕಾಣೆಯಾಗಿವೆ ಎಂದು ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಮನೆಕೆಲಸದ ಸಿಬಂದಿಗಳಾದ ಲಲಿತಾ ದೇವಿ ಮತ್ತು ಸಿಲ್ದಾರ್ ಪಾಲ್ ಇದ್ದಕ್ಕಿದ್ದಂತೆ ತಮ್ಮ ಕೆಲಸವನ್ನು ತೊರೆದು ಹೋಗಿದ್ದಾರೆ .

ಇದರಿಂದಾಗಿ ಮನೆಯಲ್ಲಿ ಕಳ್ಳತನವಾದ ವಿಚಾರದಲ್ಲಿ ಮನೆಕೆಲಸದ ಸಿಬ್ಬಂದಿಗಳ ಕೈಚಳಕ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು, ಕೂಲಂಕುಷ ವಿಚಾರಣೆ ನಡೆಸಬೇಕೆಂದು ಯುವರಾಜ್ ಸಿಂಗ್ ತಾಯಿ ಪೊಲೀಸರಲ್ಲಿ ಒತ್ತಾಯಿಸಿದ್ದಾರೆ.ಎನ್.ವಿ ಅಂಜಾರಿಯಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾ ನೇಮಕ

ಶಬ್ನಮ್ ಸಿಂಗ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿತನಿಖೆ ನಡೆಸುತ್ತಿದ್ದಾರೆ.

error: Content is protected !!