ಬೆಂಗಳೂರು: ಬೆಂಗಳೂರಿನ ಸಂಪಿಗೆ ಥಿಯೇಟರ್ ಮಾಲೀಕನನ್ನು ಅವರೇ ಮನೆ ಕೆಲಸಕ್ಕೆ ಇಟ್ಟಿದ್ದ ದಂಪತಿ ಕಟ್ಟಿಹಾಕಿ, ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಘಟನೆ ವಿವರ: ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ತಮ್ಮ ಜಯನಗರದ ಮನೆಯಲ್ಲಿ ಒಬ್ಬರೇ ಇದ್ದಾಗ, ನೇಪಾಳ ಮೂಲದ ಮನೆ ಕೆಲಸದವರು ಗಣೇಶ್ ಮತ್ತು ಗೀತಾ ಎಂಬ ದಂಪತಿ, ಅ.2ರಂದು ಅವರ ಕೈಕಾಲುಗಳನ್ನು ಕಟ್ಟಿಹಾಕಿ, 1 ಕೆಜಿ ಚಿನ್ನಾಭರಣ ಹಾಗೂ 2 ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದಾರೆ.
ನಾಗೇಶ್ ಅವರ ಕುಟುಂಬ ಸಮಾರಂಭದ ನಿಮಿತ್ತ ಹೊರಗಡೆ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದಂಪತಿ ಕಳೆದ 2 ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು.ಇದನ್ನು ಓದಿ –ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
ಜಯನಗರ ಪೊಲೀಸರು ಮೊಬೈಲ್ ಲೊಕೇಶನ್ ಮತ್ತು ಸಿಸಿಟಿವಿ ಆಧರಿಸಿ ತನಿಖೆ ನಡೆಸಿ, ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ