ಬೆಂಗಳೂರು ಟ್ರಾಫಿಕ್ ಪೊಲೀಸ್ ಕಮಿಷನರ್ ರವಿಕಾಂತೇಗೌಡರ ಮನೆಯಲ್ಲಿಯೇ ಕಳ್ಳತನ

Team Newsnap
0 Min Read

ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಕಮೀಷನರ್ ಬಿ.ಆರ್ ರವಿಕಾಂತೇಗೌಡ ನಿವಾಸದಲ್ಲಿ ಕಳ್ಳತನ ನಡೆದ ಘಟನೆಯ ದೂರು ದಾಖಲಾಗಿದೆ.

ಈ ಕುರಿತು ಸಂಜಯ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತದೆ.

ರವಿಕಾಂತೇಗೌಡ ಮನೆಯಲ್ಲಿನ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳು ನಾಪತ್ತೆಯಾಗಿವೆ.

ಕಮೀಷನರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಳ್ಳತನ ನಡೆದ ಬಳಿಕ ಮಹಿಳೆ ನಾಪತ್ತೆಯಾಗಿದ್ದಾಳೆ , ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಸಂಜಯನಗರ ಪೊಲೀಸರು ದೂರು ಪರಿಶೀಲಿಸುತ್ತಿದ್ದಾರೆ.

Share This Article
Leave a comment