January 8, 2025

Newsnap Kannada

The World at your finger tips!

hassan

ಸೈಕಲ್ ಗುರುವಿಗೆ ಸಾಥ್ ನೀಡಿದ ಹಾಸನದ ಯುವಜನತೆ

Spread the love

ಸನಾತನ ಧರ್ಮ ಪಾಲಕ ನಾಮಧಾರಿ ರಾಮದಾಸರಿಗೆ ಹಾಸನದ ಉತ್ಸಾಹಿ ಯುವ ಸೈಕಲ್ ಸವಾರರ ತಂಡ pedal demons ಹಾಸನದ ನಗರದಿಂದ ಹೊರವಲಯದವರೆಗೂ ನಂತರ ಬೇಲೂರು ಮಾರ್ಗದ ಅರ್ಧ ದೂರದವರೆಗೂ ರಾಮದಾಸ್ ಜಿ ಅವರೊಂದಿಗೆ ಸೈಕಲ್ ನಲ್ಲಿ ಸವಾರಿ ನಡೆಸಿ ಬೀಳ್ಕೊಡುಗೆಯನ್ನು ಕೊಟ್ಟರು.

hassan1

ನಾಮಧಾರಿ ದಾಸ್ ಯಾರು? ಇವರ ಸಂಕಲ್ಪ ಏನು?

ಸನಾತನ ಸಂಸ್ಕೃತಿಯ ಪಾಲಕರೆ ನಾಮಧಾರಿ ದಾಸ್ ರಾಮದಾಸ್ ಮೂಲತಃ ಮಹಾರಾಷ್ಟ್ರದವರು. ಪ್ರಸ್ತುತ ನರ್ಮದಾ ನದಿಯ ತಟದ ಮಧ್ಯಪ್ರದೇಶ ಭಾಗದಲ್ಲಿ ಆಶ್ರಮದಿಂದ ಲೋಕಕಲ್ಯಾಣಕ್ಕಾಗಿ ಭಾರತ ಯಾತ್ರೆಯನ್ನು ಮಾಡಲು ಯೋಚಿಸಿ ಗಂಗೋತ್ರಿಯಿಂದ ಪ್ರಾರಂಭವಾದ ಇವರ ಪಾದಯಾತ್ರೆಯನ್ನು ಗಂಗೋತ್ರಿ ಯಮುನೋತ್ರಿ, ಕೇದಾರನಾಥ್ ,ಬದ್ರಿನಾಥ್ , ಸೇರಿದಂತೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನವನ್ನು ಮಾಡಿ ರಾಮೇಶ್ವರಂನಲ್ಲಿ ಪಾದಯಾತ್ರೆ ಅಂತ್ಯಗೊಳಿಸಿದರು

ಸೈಕಲ್ ಮೂಲಕ ಭಾರತ ಯಾತ್ರೆ:

ಭಾರತಯಾತ್ರೆ ಸೈಕಲ್ ಮೂಲಕ ಮುಂದುವರೆದು ತಮಿಳುನಾಡು ಕೇರಳ ಮಾರ್ಗವಾಗಿ ಕರ್ನಾಟಕವನ್ನು ಪ್ರವೇಶಿಸಿದ್ದರು. ಲಾಕ್ಡೌನ್ ಸಮಯದಲ್ಲಿ ಕರ್ನಾಟಕದ ಪಾಂಡವಪುರದ ಕ್ಯಾತನಹಳ್ಳಿಯ ಆಶ್ರಮದಲ್ಲಿ ಆರು ತಿಂಗಳ ಕಾಲ ಲೋಕಕಲ್ಯಾಣಕ್ಕಾಗಿ ನಿತ್ಯ ಅನುಷ್ಠಾನಾದಿಗಳನ್ನು ಮಾಡಿದ ನಂತರದಲ್ಲಿ ಮತ್ತೆ ಯಾತ್ರೆಯನ್ನು ಮುಂದುವರಿಸಿ ಹಾಸನ ಮಾರ್ಗವಾಗಿ ಬೇಲೂರು ,ಹಳೇಬೀಡು ,ಮೂಡಿಗೆರೆ,ಕೊಟ್ಟಿಗೆಹಾರ ಹೊರನಾಡು ,ಶೃಂಗೇರಿ , ಕೊಲ್ಲೂರು ಮೂಕಾಂಬಿಕಾ ಗೋಕರ್ಣ ಮುರುಡೇಶ್ವರ ಮಾರ್ಗವಾಗಿ ಮಹಾರಾಷ್ಟ್ರವನ್ನು ತಲುಪುವ ಸಂಕಲ್ಪವನ್ನು ಹೊಂದಿದ್ದಾರೆ.

ವಿಶೇಷ ಕ್ಷೇತ್ರಗಳ ದರ್ಶನ ಹಾಗೂ ವಾಸ ವ್ಯವಸ್ಥೆಯನ್ನು ಮಾಡಲಿಚ್ಚಿಸುವವರು ಇವರನ್ನು ಸಂಪರ್ಕಿಸಬಹುದು. ಸರಳ ವ್ಯವಸ್ಥೆ, ಸ್ನಾನ, ಸಂಧ್ಯಾವಂದನೆ ಮಾಡಲು ಮತ್ತು ವಾಸಿಸಲು ಅವಕಾಶವನ್ನು ಕಲ್ಪಿಸಿಕೊಟ್ಟರೆ ಸಾಕು. ಅವರು ಸ್ವಯಂ ಪಾಕವನ್ನು ಮಾಡಿಕೊಳ್ಳುತ್ತಾರೆ. ಅವರಿಗೆ ಬೇಕಾದ ವಸ್ತುಗಳನ್ನು ಕೊಡಬಹುದು ಇವರು ಸಾಲಿಗ್ರಾಮ ನಿತ್ಯ ಆರಾಧಕರು. ಯಾರನ್ನು ಏನು ಕೇಳದ ವ್ಯಕ್ತಿತ್ವ. ನಿತ್ಯ ಐವತ್ತು ಕಿಲೋಮೀಟರ್ ಸೈಕಲನ್ನು ತುಳಿಯುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ.
ನಾಮಧಾರಿ ದಾಸ್ ಜೀ –
95227 16161

Copyright © All rights reserved Newsnap | Newsever by AF themes.
error: Content is protected !!