ಜಲಸಂಪನ್ಮೂಲ ಸಚಿವ ಖಾತೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಕಾರಣವಾದ ಹಾಗೂ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ರಾಸಲೀಲೆ ರುವಾರಿ ಆ ಯುವತಿಯ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಪೋಲಿಸರು ಭರದಿಂದ ಮಾಡುತ್ತಿದ್ದಾರೆ.
ಸೆಕ್ಸ್ ಸಿಡಿ ಪ್ರಕರಣದ ಪ್ರಮುಖ ಕೇಂದ್ರಬಿಂದು ವಿಡಿಯೊದಲ್ಲಿರುವ ನಿಗೂಢ ಯುವತಿ ಕಳೆದ ಏಳೆಂಟು ತಿಂಗಳಿನಿಂದ ವಿಧಾನ ಸೌಧಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ವಿಧಾನಸೌಧ ಸಿಬ್ಬಂದಿಗಳು ಪೋಲಿಸರಿಗೆ ಈಕೆ ಕಳೆದ ಏಳೆಂಟು ತಿಂಗಳಿನಿಂದ ವಿಧಾನ ಸೌಧದಲ್ಲಿರುವ ರಮೇಶ್ ಜಾರಕಿಹೊಳಿ ಕಚೇರಿಗೆ ಆಗಾಗ ಬಂದು ಹೋಗುತ್ತಿದ್ದಳು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ಈ ಯುವತಿ ಬಂದಾಗಲೆಲ್ಲಾ ವಿಧಾನ ಸೌಧದ ಸಿಬ್ಬಂದಿಯೊಂದಿಗೆ ಈಕೆ ತನಗೆ ಚಿತ್ರ ನಿರ್ಮಾಣದಲ್ಲಿ ಆಸಕ್ತಿ ಇದೆ. ರಾಜ್ಯದ ಜಲಾಶಯಗಳ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಬೇಕೆಂದಿದ್ದೇನೆ ಎಂದು ಹೇಳುತ್ತಿದ್ದಳಂತೆ ಎಂದು ಸಿಬ್ಬಂದಿಗಳು ವಿವರಿಸಿದ್ದಾರೆ.
ಈ ನಡುವೆ ಯುವತಿ ವಿಧಾನ ಸೌದದ ಮಾಜಿ ಸಚಿವ ರಮೇಶ್ ಕಚೇರಿ ಬಂದು, ಹೋಗಿರುವ ಬಗ್ಗೆ ಸಿಸಿಟಿವಿ ಫುಟೇಜಸ್ ಗಳನ್ನು ಕಲೆ ಹಾಕಿ ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಮಾಜಿ ಸಚಿವ ರಮೇಶ್ ಹಾಗೂ ಆ ಯುವತಿ ನಡುವೆ ನಡೆದಿದೆ ಎನ್ನಲಾದ ಮೊಬೈಲ್ ಮಾತುಕತೆ ಹಾಗೂ ಎಷ್ಟು ಬಾರಿ ಸಂಪರ್ಕ ಮಾಡಿದ್ದರು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ