January 16, 2025

Newsnap Kannada

The World at your finger tips!

BJP , Congress , MLC

ಸರ್ಕಾರದ ಕೆಲಸ ದೇವರ ಕೆಲಸ: ಸ್ವಾಮೀಜಿಗಳ ಕೆಲಸವಲ್ಲ‌ – ಎಚ್ ವಿಶ್ವನಾಥ್

Spread the love

ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಲಾಗಿದೆ. ಆದರೆ, ಇದನ್ನು ಈಗ ಸರ್ಕಾರದ ಕೆಲಸ ಸ್ವಾಮೀಜಿಗಳ ಕೆಲಸವಾಗಿ ಬದಲಾಯಿಸಬೇಕಿದೆ
ಎಂದು ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಬುಧವಾರ‌ ಕುಟಿಕಿದರು.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾನಾಡಿದ ವಿಶ್ವನಾಥ್ , ರಾಜಕಾರಣ ಸ್ವಾಮೀಜಿಗಳ ಕೈಗೆ ಹೋಗಬಾರದು. ಸ್ವಾಮೀಜಿಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಗಳಾಗಬಾರದು ಎಂದು ಹೇಳಿದರು.

ಯಡಿಯೂರಪ್ಪ ಬದಲಾದ ತಕ್ಷಣ ಶೂನ್ಯ ಸೃಷ್ಟಿಯಾಗಲ್ಲ, ಮಠಗಳ ಉತ್ತರಾಧಿಕಾರಿ ಮಾಡುವಾಗ ರಾಜಕಾರಣಿಗಳು ಮಧ್ಯ ಪ್ರವೇಶಿಸುತ್ತಾರಾ? ನಾಯಕತ್ವ ಬದಲಾವಣೆ ಶಾಸಕರ ಕೈಯಲ್ಲಿದೆ. ಮತ ಹಾಕುವವರು ಶಾಸಕರು, ನೀವು ಬಂದು ಮತ ಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಸಾಂದರ್ಭಿಕ ಶಿಶು :
ಯಡಿಯೂರಪ್ಪ ಎರಡು ಬಾರಿ ಸಿಎಂ ಆಗಿದ್ದಾರೆ. ಎರಡು ಬಾರಿಯೂ ಪರಿಸ್ಥಿತಿಯ ಶಿಶುವಾದರು. ಮೊದಲ ಬಾರಿಯೂ ಗೌರವಯುತವಾಗಿ ಸಿಎಂ ಸ್ಥಾನದಿಂದ ಅವರು ನಿರ್ಗಮಿಸಲಿಲ್ಲ. 48 ಇದ್ದ ಸ್ಥಾನ 104 ಸ್ಥಾನ ಆಗಿದ್ದು ಮೋದಿ ಅವರಿಂದ. ಮೋದಿ ಅವರ ಕಾರ್ಯ ಸಿದ್ಧಾಂತಕ್ಕೆ ವಿರೋಧವಾಗಿ ಇಲ್ಲಿ ಆಡಳಿತ ನಡೆಯುತ್ತಿದೆ. ಯಡಿಯೂರಪ್ಪ ಹೋರಾಟಗಾರ ಎಂದು ಅವರ ಕೈಗೆ ಅಧಿಕಾರ ಕೊಡಲಾಯಿತು. ಆದರೆ ಕಥೆ ಏನಾಗಿದೆ ನೋಡಿ, ಸಿಎಂ ಆದ ಮೇಲೆ ಯಡಿಯೂರಪ್ಪ ಅವರ ತಮ್ಮ ನಾಲಿಗೆ, ಕೈಯನ್ನು ಮಗನ ಕೈಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನ ನಿಜವಾದ ನಿಲುವು ಯಾವುದು ?

ಈ ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ಹೋಗಬೇಕು ಎನ್ನುತ್ತಾರೆ. ಅದೇ ಪಕ್ಷದ ಶಾಮನೂರು ಶಿವಶಂಕರಪ್ಪ ಸಿಎಂ ಮನೆಗೆ ಹೋಗಿ ಅವರಿಗೆ ಬೆಂಬಲ ಕೊಡುತ್ತಾರೆ. ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ಶಿಕ್ಷಣದ ದಲ್ಲಾಳಿಗಳು. ಕಾಂಗ್ರೆಸ್ ನ ನಿಜವಾದ ನಿಲುವು ಏನು? ಶಾಮನೂರು, ಎಂ.ಬಿ.ಪಾಟೀಲ್ ಯಾವ ಪಕ್ಷದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಂಬೆ ಟೀಂನವರನ್ನು ಮಂತ್ರಿ ಮಾಡಬೇಡಿ

ಮುಂದೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ. ಬದಲಾವಣೆಗಾಗಿ ಬೆಂಬಲವನ್ನು ಎಲ್ಲರೂ ನೀಡಿದ್ದರು. ಆದರೆ ಅಧಿಕಾರ ಸಿಕ್ಕ ಮೇಲೆ ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರೀತಿಯಾದರು. ಕೊಡಿ ಕೊಡಿ ಎನ್ನುವುದಕ್ಕೆ ಶುರು ಮಾಡಿದ್ದರು. ಅವರಿಗೆಲ್ಲಾ ಯಡಿಯೂರಪ್ಪ ಸಿಎಂ ಆಗಿರಲಿಲ್ಲ, ಬದಲಿಗೆ ವಿಜಯೇಂದ್ರ ಸಿಎಂ ಆಗಿದ್ದರು. 17 ಜನಕ್ಕೆ ಅಧಿಕಾರ ನೀಡದಿದ್ದರು ಪರವಾಗಿಲ್ಲ. ಆದರೆ ಇನ್ನು ಯಾವುದೇ ಅಧಿಕಾರ ನೀಡಬಾರದು. ಅವರು ಎಲ್ಲಿಗೂ ಹೋಗುವುದಿಲ್ಲ, ಹೋದರೆ ಹೋಗಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!