ಮೂರು ತಿಂಗಳ ಮಗುವನ್ನುKPSC ಪರೀಕ್ಷಾ ಕೇಂದ್ರದಲ್ಲೇ ಎತ್ತಿ ಆಡಿಸಿ ತಾಯಿಗೆ ನೆರವಾದ ಮಹಿಳಾ ಪೇದೆ

Team Newsnap
1 Min Read

ಮೊನ್ನೆ ಹಾವೇರಿಯಲ್ಲಿ ನಡೆದ KPSE ಪರೀಕ್ಷೆ ವೇಳೆಯಲ್ಲಿ ಮಹಿಳಾ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ

ಹಾವೇರಿಯ ಎಸ್.ಡಿ.ಎಂ ಕಾಲೇಜಿನಲ್ಲಿ ಪರೀಕ್ಷೇ ಬರೆಯಲು ಮಹಿಳಾ ಅಭ್ಯರ್ಥಿಯೊಬ್ಬರು ತನ್ನ 3 ತಿಂಗಳ ಹಸುಗೂಸಿನ ಸಮೇತ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದರು.

ಈ ಸ್ಪಧಾ೯ತ್ಮಕ ಪರೀಕ್ಷೆ ಬರೆಯುತ್ತಲೇ ಸುಮಾರು ಒಂದು ಗಂಟೆಯ ಕಾಲ ಮಗುವನ್ನು ನೋಡಿಕೊಂಡೆ ಪರೀಕ್ಷೆ ಬರೆದಿದ್ದರು.

ಆದರೆ ಪರೀಕ್ಷಾ ಸಮಯ ಮುಗಿಯುತ್ತಿದ್ದಂತೆ ಮಹಿಳಾ ಅಭ್ಯಥಿ೯ ಪುಟ್ಟ ಮಗು ಅಳುತ್ತಿದ್ದರಿಂದ ಆಕೆಗೆ ಆತಂಕವೂ ಹೆಚ್ಚಾಗುತ್ತಿತ್ತು.

ಇತ್ತ ಪರೀಕ್ಷೆಯಲ್ಲಿದ್ದ ಕಾರಣ ಮಗುವಿಗೆ ಸಮಯಕ್ಕೆ ಸರಿಯಾಗಿ ಎದೆ ಹಾಲು ಕೊಡಲು ಸಾಧ್ಯವಾಗಿರಲಿಲ್ಲ. ಇದರಿಂದ ಕಂದಮ್ಮನ ಅಳು ಹೆಚ್ಚಾಗಿತ್ತು..

ಈ ವೇಳೆ ಕಾಲೇಜಿನಲ್ಲಿ ಭದ್ರತೆಗೆ ಆಗಮಿಸಿದ್ದ ಬ್ಯಾಡಗಿ ಠಾಣೆಯ ಮಹಿಳಾ ಪೊಲೀಸ್​ ಮಹಿಳಾ ಪೇದೆ ನೇತ್ರಾವತಿ ಪರೀಕ್ಷೆ ಬರೆಯುತ್ತಿದ್ದ ಮಹಿಳಾ ಅಭ್ಯರ್ಥಿಗೆ ಧೈರ್ಯ ಹೇಳಿ, ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಿ, ಆರೈಕೆ ಮಾಡಲು ಮುಂದಾದರು.

ಮಹಿಳಾ ಪೇದೆ ಮತ್ತೊಬ್ಬ ಮಹಿಳೆಯ ಕಷ್ಟ ಅರಿತು ಪರೀಕ್ಷಾ ಕೇಂದ್ರದಲ್ಲಿ ಎತ್ತಿ ಆಡಿಸಿ ಸಂತೈಸಿದ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ಮಹಿಳಾ ಪೇದೆಯ ಮಾತೃ ಹೃದಯ ಸೇವೆಯನ್ನೂ ಕೂಡ ಸಾವ೯ಜನಿಕರು ಮೆಚ್ಚಿಕೊಂಡಿದ್ದಾರೆ.

Share This Article
Leave a comment