January 14, 2025

Newsnap Kannada

The World at your finger tips!

video

ಮಹಿಳೆ ಮುಂದೆ ವಿಡಿಯೋ ಕಾಲ್ ನಲ್ಲಿ ‌ ಬೆತ್ತಲಾದ ಈತನಿಗೆ 20 ಸಾವಿರ ರು. ನಾಮ !

Spread the love

ವೀಡಿಯೋ ಕಾಲ್ ನಲ್ಲಿ ಮಹಿಳೆಯ ಮುಂದೆ ಬೆತ್ತಲಾಗಿ ಆತ ಬಟ್ಟೆ ಬಿಚ್ಚಿ ನಿಂತರೆ, ಈಕೆ ರೆಕಾರ್ಡ್ ಮಾಡಿ 1 ಲಕ್ಷಕ್ಕೆ ಡಿಮ್ಯಾಂಡ್ ಇಟ್ಲು.

ಇದು ಬೆಂಗಳೂರಿನಲ್ಲಿ ನಡೆದ ಘಟನೆ.
ಅಂಬಿತ್ ಕುಮಾರ್ ಮಿಶ್ರಾ ಎಂಬ ವ್ಯಕ್ತಿ ಶ್ರೇಯಾ ಎಂಬ ಮಹಿಳೆಯ ಮುಂದೆ ಬೆತ್ತಲಾಗಿ ಹಣ ಕಳೆದುಕೊಂಡಿದ್ದಾನೆ.

ಫೆಬ್ರವರಿ 9ರಂದು ಶ್ರೇಯಾ, ಅಂಬಿತ್ ಗೆ ವಾಟ್ಸಪ್ ಕಾಲ್ ಮಾಡಿದ್ದಾಳೆ. ಈ ವೇಳೆ ಅಂಬಿತ್ ನನ್ನು ಬಟ್ಟೆ ಬಿಚ್ಚುವಂತೆ ಕೇಳಿಕೊಂಡಿದ್ದಾನೆ. ಮಹಿಳೆಯ ಬಣ್ಣದ ಮಾತುಗಳಿಗೆ ಮರುಳಾದ ಅಂಬಿತ್ ಲೈವ್ ನಲ್ಲಿಯೇ ಬೆತ್ತಲಾಗಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಶ್ರೇಯಾ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ನಂತರ ಬಳಿಕ ಹಣ ನೀಡುವಂತೆ ಪೀಡಿಸಿದ್ದಾಳೆ. ಒಂದು ವೇಳೆ ನೀನು ಹಣ ಕೊಡದಿದ್ದರೆ ನಿನ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.

ಇದರಿಂದ ಗಾಬರಿಗೊಂಡ ಅಂಬಿತ್ ಮಹಿಳೆಗೆ 20 ಸಾವಿರ ರೂ. ನೀಡಿದ್ದಾನೆ. ಹಣ ಕಳೆದುಕೊಂಡ ಬಳಿಕ ಅಂಬಿತ್ ಮಹಿಳೆಯ ವಿರುದ್ಧ ವಂಚನೆ ಹಾಗೂ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾನೆ.

ಪರಿಚಯ ಎಲ್ಲಿ‌ ಆಗಿತ್ತು ಗೊತ್ತಾ?

ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ಮೂಲಕ ಅಂಬಿತ್ ಹಾಗೂ ಶ್ರೇಯಾ ಪರಿಚಯವಾಗಿದೆ. ಅಲ್ಲದೆ ಈಕೆ ತಾನು ಬೆಂಗಳೂರಿನಲ್ಲಿ ಟೆಕ್ಕಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ.

ನಂತರ ಮದುವೆ ಆಗುವ ಇಂಗಿತ ಕೂಡ ಅಂಬಿತ್ ಮುಂದೆ ಇಟ್ಟಿದ್ದಾಳೆ. ಅಂತೆಯೇ ಇಬ್ಬರು ಪರಸ್ಪರ ಪರಿಚಯ ಮಾಡಿಕೊಂಡಿದ್ದು, ಕ್ರಮೇಣ ಇಬ್ಬರು ಕ್ಲೋಸ್ ಆದರು.

ಇತ್ತ ಇದನ್ನೇ ಬಂಡವಾಳ ಮಾಡಿಕೊಂಡ ಶ್ರೇಯಾ, ಅಂಬಿತ್ ಮುಂದೆ ತನ್ನ ಕರಾಳ ಮುಖ ಪ್ರದರ್ಶಿಸಿಯೇ ಬಿಟ್ಟಿದ್ದಾಳೆ. ವಾಟ್ಸಪ್ ವೀಡಿಯೋ ಕಾಲ್ ಮಾಡಿ ಮಾತಾಡ್ತಾ ಮಾತಾಡ್ತಾ ತನ್ನ ಬಟ್ಟೆ ಬಿಚ್ಚಿದ್ದಾಳೆ. ನಂತರ ಅಂಬಿತ್ ಗೆ ಕೂಡ ಬಟ್ಟೆ ಬಿಚ್ಚುವಂತೆ ಕೇಳಿಕೊಂಡಿದ್ದಾಳೆ. ಇತ್ತ ಶ್ರೇಯಾ ಮಾತು ನಂಬಿದ ಅಂಬಿತ್ ಕೂಡ ಆಕೆಯ ಮುಂದೆ ಬೆತ್ತಲಾಗಿದ್ದಾನೆ.
ಅಂಬಿತ್ ಬಟ್ಟೆ ಕಳಚುತ್ತಿದ್ದಂತೆಯೇ ಶ್ರೇಯಾ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ನಂತರ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಒಂದು ವೇಳೆ ಹಣ ಕೊಡದಿದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ. ಹೀಗಾಗಿ ಭಯಗೊಂಡು ಫೆ.7ರಂದು 20 ಸಾವಿರ ಹಣ ನೀಡಿದೆ. ಆದರೆ ಆಕೆ ಇನ್ನೂ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ಎಂದು ಅಂಬಿತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!